ರಾಮ ಮಂದಿರ ಶಿಲಾನ್ಯಾಸ: ಆಹ್ವಾನಿತರ ಪಟ್ಟಿಯಲ್ಲಿ ಅಂಬಾನಿ, ಅದಾನಿ; 'ಮಹಾ' ಸಿಎಂ ಉದ್ಧವ್ ಹೆಸರಿಲ್ಲ!

ರಾಮಮಂದಿರ ಶಿಲಾನ್ಯಾಸ ಸಂಘಟನಾ ಸಮಿತಿ ಆಹ್ವಾನಿತರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಪಟ್ಟಿಯಲ್ಲಿ ಶಿವಸೇನೆ ಮುಖಂಡರ ಹೆಸರುಗಳನ್ನು ಸೇರಿಸಿಲ್ಲ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಅಯೋಧ್ಯೆ: ರಾಮಮಂದಿರ ಶಿಲಾನ್ಯಾಸ ಸಂಘಟನಾ ಸಮಿತಿ ಆಹ್ವಾನಿತರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಪಟ್ಟಿಯಲ್ಲಿ ಶಿವಸೇನೆ ಮುಖಂಡರ ಹೆಸರುಗಳನ್ನು ಸೇರಿಸಿಲ್ಲ.

ಆದರೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ಕೆಲ ಕೈಗಾರಿಕೋದ್ಯಮಿಗಳು ಆಗಸ್ಟ್ 5 ರಂದು ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಖಚಿತವಾಗಿದೆ.

ರಾಜಕೀಯ ಮತ್ತು ಧಾರ್ಮಿಕ ವ್ಯಕ್ತಿಗಳ ಜೊತೆಗೆ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಸೇರಿದಂತೆ ಕೆಲ ಕೈಗಾರಿಕೋದ್ಯಮಿಗಳನ್ನು ಸಹ ಈ ಮಹತ್ವದ ಸಮಾರಂಭಕ್ಕೆ ಆಹ್ವಾನಿಸಲಾಗುವುದು ಎಂದು ಇಲ್ಲಿನ ಮೂಲಗಳು ಸೋಮವಾರ ತಿಳಿಸಿವೆ. 

ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಹ ಇದುವರೆಗೆ ಶಿವಸೇನೆಯ ಮುಖಂಡರನ್ನು ಶಿಲಾನ್ಯಾಸಕ್ಕೆ ಆಹ್ವಾನಿಸಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. ಬಿಜೆಪಿ ಆಳ್ವಿಕೆ ಇರುವ ರಾಜ್ಯಗಳ ಅನೇಕ ಮುಖ್ಯಮಂತ್ರಿಗಳಿಗೆ ಆಹ್ವಾನ ಸಿಗಬಹುದಾದರೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಈ ಅವಕಾಶ ದೊರೆಯುವುದು ಅನುಮಾನ ಎನ್ನಲಾಗಿದೆ.

ಠಾಕ್ರೆ ಇಲ್ಲವೇ ಬಿಜೆಪಿ ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷಗಳ ನಾಯಕರು ಈ ಸಮಾರಂಭಕ್ಕೆ ಆಹ್ವಾನವನ್ನು ಪಡೆಯುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ. ಶಿಲಾನ್ಯಾಸ ಸಮಾರಂಭಕ್ಕೆ ಆಹ್ವಾನಿಸಬೇಕಾದ 268 ಜನರ ಪಟ್ಟಿಯನ್ನು ಟ್ರಸ್ಟ್ ಈಗಾಗಲೇ ಸಿದ್ಧಪಡಿಸಿದೆ. ಆದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಒತ್ತಾಯವನ್ನು ಅನುಸರಿಸಿ ಆಹ್ವಾನವನ್ನು 200 ಜನರಿಗೆ ಸೀಮಿತಗೊಳಿಸಬೇಕಾಗಿದೆ. ಆದ್ದರಿಂದ ಕೆಲ ಹೆಸರುಗಳನ್ನು ಕೈಬಿಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com