ಮತ್ತೆ ಚೀನಾ ಆ್ಯಪ್ ನಿಷೇಧಿಸಿದ ಭಾರತದ ವಿರುದ್ಧ ಚೀನಾ ರಾಯಭಾರಿ ವಾಗ್ದಾಳಿ!

ಮತ್ತೆ ಚೀನಾ ಆ್ಯಪ್ ಬ್ಯಾನ್ ಮಾಡಿರುವ ಭಾರತದ ಕ್ರಮವನ್ನು ತೀವ್ರವಾಗಿ ಟೀಕಿಸಿರುವ ಭಾರತದಲ್ಲಿನ ಚೀನಾ ರಾಯಭಾರಿ, ಚೀನಾ ವ್ಯವಹಾರ ಸೇರಿದಂತೆ ಭಾರತದಲ್ಲಿನ ಅಂತಾರಾಷ್ಟ್ರೀಯ ಹೂಡಿಕೆದಾರರ ಹಿತಾಸಕ್ತಿ ಮತ್ತು ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸಬೇಕಾದದ್ದು ಭಾರತ ಸರ್ಕಾರದ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಚೀನಾ ಆ್ಯಪ್ ವಿರೋಧಿ ಪ್ರತಿಭಟನೆಯ ಚಿತ್ರ
ಚೀನಾ ಆ್ಯಪ್ ವಿರೋಧಿ ಪ್ರತಿಭಟನೆಯ ಚಿತ್ರ

ನವದೆಹಲಿ: ಮತ್ತೆ ಚೀನಾ ಆ್ಯಪ್ ಬ್ಯಾನ್ ಮಾಡಿರುವ ಭಾರತದ ಕ್ರಮವನ್ನು ತೀವ್ರವಾಗಿ ಟೀಕಿಸಿರುವ ಭಾರತದಲ್ಲಿನ ಚೀನಾ ರಾಯಭಾರಿ, ಚೀನಾ ವ್ಯವಹಾರ ಸೇರಿದಂತೆ ಭಾರತದಲ್ಲಿನ ಅಂತಾರಾಷ್ಟ್ರೀಯ ಹೂಡಿಕೆದಾರರ ಹಿತಾಸಕ್ತಿ ಮತ್ತು ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸಬೇಕಾದದ್ದು ಭಾರತ ಸರ್ಕಾರದ ಜವಾಬ್ದಾರಿಯಾಗಿದೆ ಎಂದಿದ್ದಾರೆ.

ಚೀನಾ ಹಾಗೂ ಚೀನಾ ನಡುವಣ ಪ್ರಾಯೋಗಿಕ ಸಹಕಾರದಿಂದ ಪರಸ್ಪರ ಲಾಭವಾಗಲಿದೆ. ಅಂತಹ ಸಹಕಾರದಲ್ಲಿ ಭಾರತದ ಕಡೆಯಿಂದ  ಉದ್ದೇಶಪೂರ್ವಕ ಹಸ್ತಕ್ಷೇಪವು ಹಿತಾಸಕ್ತಿಗಳನ್ನು ಪೂರೈಸುವುದಿಲ್ಲ ಎಂದು ಭಾರತದಲ್ಲಿನ ಚೀನಾ ರಾಯಭಾರಿ ಜಿ ರಾಂಗ್ ಮಂಗಳವಾರ ಹೇಳಿದ್ದಾರೆ.

ಚೀನಾ ಕಂಪನಿಗಳ ಹಿಂತಾಸಕ್ತಿ ಮತ್ತು ಕಾನೂನುಬದ್ಧ ಹಕ್ಕಗಳ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಚೀನಾ ಕೈಗೊಳ್ಳಲಿದೆ ಎಂದು ರಾಂಗ್ ತಿಳಿಸಿದ್ದಾರೆ.

59 ಚೀನಾ ಆ್ಯಪ್ ನಿಷೇಧ ಮಾಡಿದ ಒಂದು ತಿಂಗಳ ನಂತರ ಮತ್ತೆ 47 ಆ್ಯಪ್ ಗಳನ್ನು ಭಾರತ ಬ್ಯಾನ್ ಮಾಡಿದೆ.ಈ  ಆ್ಯಪ್ ಗಳ ಹೆಸರನ್ನು ಸರ್ಕಾರ ಬಹಿರಂಗಪಡಿಸಿಲ್ಲ, ಟಿಕ್ ಟಾಕ್ ಲೈಟ್, ಹಲೋ ಲೈಟ್, ಶೇರ್ ಹಿಟ್ ಲೈಟ್, ಬಿಗೊ ಲೈವ್ ಲೈಟ್ ಕೂಡಾ ಈ ಪಟ್ಟಿಯಲ್ಲಿವೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com