ನೋಯ್ಡಾ ಆಸ್ಪತ್ರೆಯಲ್ಲಿ ವೈದ್ಯರಿಂದ ಲೈಂಗಿಕ ಕಿರುಕುಳ: ಕೋವಿಡ್-19 ಸೋಂಕಿತೆಯ ಆರೋಪ

ಐಸೊಲೇಷನ್ ವಾರ್ಡ್ ನಲ್ಲಿ ತಮ್ಮ ಜೊತೆಗಿದ್ದ ವೈದ್ಯ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಕೋವಿಡ್-19 ಸೋಂಕಿತ 20 ವರ್ಷದ ಮಹಿಳೆಯೊಬ್ಬರು ಆರೋಪಿಸಿದ್ದಾರೆ. 

Published: 28th July 2020 11:34 AM  |   Last Updated: 28th July 2020 11:34 AM   |  A+A-


Delhi: Minor Kabaddi player accuses coach of molestation

ಸಾಂದರ್ಭಿಕ ಚಿತ್ರ

Posted By : Srinivas Rao BV
Source : PTI

ನೋಯ್ಡಾ: ಐಸೊಲೇಷನ್ ವಾರ್ಡ್ ನಲ್ಲಿ ತಮ್ಮ ಜೊತೆಗಿದ್ದ ವೈದ್ಯ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಕೋವಿಡ್-19 ಸೋಂಕಿತ 20 ವರ್ಷದ ಮಹಿಳೆಯೊಬ್ಬರು ಆರೋಪಿಸಿದ್ದಾರೆ. 

ನೋಯ್ಡಾದಲ್ಲಿ ಈ ಘಟನೆ ಸಂಭವಿಸಿದ್ದು, ಸಂತ್ರಸ್ತೆ ಹಾಗೂ ಕಿರುಕುಳ ನೀಡಿದ್ದ ವೈದ್ಯ ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್-19 ಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಮಹಿಳೆ ನೀಡಿರುವ ದೂರನ್ನು ಆಧರಿಸಿ ಎಕ್ಸ್ಪ್ರೆಸ್ ವೇ ಪೊಲೀಸ್ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಮಹಿಳೆ ಹಾಗೂ ಪುರುಷರಿಬ್ಬರನ್ನೂ ಒಂದೇ ಕೋವಿಡ್-19 ಐಸೊಲೇಷನ್ ವಾರ್ಡ್ ನಲ್ಲಿರಿಸಿ ಮೇಲ್ನೋಟಕ್ಕೆ ಆಸ್ಪತ್ರೆಯವರು ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಕಾಣುತ್ತಿದೆ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ದೂರು ನೀಡಿರುವ ಮಹಿಳೆ ಹಾಗೂ ಆರೋಪಿ ಇಬ್ಬರಿಗೂ ಸಹ ಕಳೆದ ವಾರ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಈ ಮಹಿಳೆ ಇದ್ದ ಐಸೊಲೇಷನ್ ವಾರ್ಡ್ ನಲ್ಲಿಯೇ ಕೋವಿಡ್-19 ಸೋಂಕು ವೈದ್ಯರೂ ದಾಖಲಾಗಿದ್ದರು ಎಂದು ನೋಯ್ಡಾದ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ರಣ್ ವಿಜಯ್ ಸಿಂಗ್ ಹೇಳಿದ್ದಾರೆ. 

ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನೂ ಒಂದೇ ವಾರ್ಡ್ ನಲ್ಲಿರಿಸಲಾಗಿತ್ತ ಎಂಬ ಮಾಹಿತಿಯನ್ನು ವೈದ್ಯಾಧಿಕಾರಿಗಳ ಮೂಲಕ ಸಂಗ್ರಹಿಸುತ್ತಿದ್ದೇವೆ, ಆರೋಪಿ ಇನ್ನೂ ಐಸೊಲೇಷನ್ ನಲ್ಲಿದ್ದು ಆತನ ಹೇಳಿಕೆಯನ್ನೂ ಪಡೆಯಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp