ವಿಧಾನಮಂಡಲ ಅಧಿವೇಶನ ದಿನನಿಗದಿ ಬೆನ್ನಲ್ಲೇ ಕುದುರೆ ವ್ಯಾಪಾರದ ದರದಲ್ಲಿ ಏರಿಕೆ: ರಾಜಸ್ಥಾನ ಸಿಎಂ ಗೆಹ್ಲೋಟ್

ಆಗಸ್ಟ್ 14 ರಿಂದ ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದೆ ಎಂದು ಘೋಷಿಸಿದ ನಂತರ ರಾಜ್ಯದಲ್ಲಿ 'ಕುದುರೆ ವ್ಯಾಪಾರದ ದರ' ಹೆಚ್ಚಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್

ಜೈಪುರ್: ಆಗಸ್ಟ್ 14 ರಿಂದ ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದೆ ಎಂದು ಘೋಷಿಸಿದ ನಂತರ ರಾಜ್ಯದಲ್ಲಿ 'ಕುದುರೆ ವ್ಯಾಪಾರದ ದರ' ಹೆಚ್ಚಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಕಳೆದ ರಾತ್ರಿ ವಿಧಾನಸಭೆ ಅಧಿವೇಶನ ದಿನಾಂಕ ಘೋಷಿಸಿದ ನಂತರ, ಕುದುರೆ ವ್ಯಾಪಾರದ ದರಗಳು ಹೆಚ್ಚಿದೆ. ಈ ಮೊದಲು ಮೊದಲ ಕಂತು 10 ಕೋಟಿ ರೂ. ಮತ್ತು ಎರಡನೆಯದು 15 ಕೋಟಿ ರೂ. ಇದ್ದಿತ್ತು. ಈಗ ಮತ್ತೆ ಏರಿಕೆಯಾಗಿದೆ, ಅಲ್ಲದೆ  ಯಾರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆಂದು ಎಲ್ಲರಿಗೂ ತಿಳಿದಿದೆ ಎಂದು  ಗೆಹ್ಲೋಟ್ ಸುದ್ದಿಗಾರರಿಗೆ ತಿಳಿಸಿದರು.

ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ವಿರುದ್ಧ ಹೇಳಿಕೆ ನೀಡಿದ್ದನ್ನು ಗುರಿಯಾಗಿಸಿಕೊಂಡು, ಮಾಯಾವತಿ  ಬಿಜೆಪಿಯ ಆಜ್ಞೆಯ ಮೇರೆಗೆ ವರ್ತಿಸಿದ್ದಾರೆ ಎಂದು ಗೆಹ್ಲೋಟ್ ಆರೋಪಿಸಿದರು. ಅದೇವೇಳೆ ಆಕೆಯ ಆರೋಪ ಸಮರ್ಥನೀಯವಲ್ಲ ಎಂದು ಗೆಹ್ಲೋಟ್ ಹೇಳಿದ್ದಾರೆ.

ಆಗಸ್ಟ್ 14 ರಿಂದ ಅಧಿವೇಶನ ನಡೆಸಲು ರಾಜ್ಯಪಾಲ ಕಲ್ರಾಜ್ ಮಿಶ್ರಾ ಒಪ್ಪಿಕೊಂಡಿದ್ದರಿಂದ ರಾಜಸ್ಥಾನ ವಿಧಾನಸಭೆ ಕಲಾಪದದ ಬಗೆಗಿನ ಗೊಂದಲಕ್ಕೆ ತೆರೆ ಬಿದ್ದಿದೆ. 

ರಾಜಸ್ಥಾನ ವಿಧಾನಸಭೆ ಅಧಿವೇಶನ ಕರೆಯಲು ಅಶೋಕ್ ಗೆಹ್ಲೋಟ್ ಕ್ಯಾಬಿನೆಟ್ ರಾಜ್ಯಪಾಲರಿಗೆ ನಾಲ್ಕನೇ ಪ್ರಸ್ತಾವನೆಯನ್ನು ಕಳುಹಿಸಿದ ಒಂದೆರಡು ಗಂಟೆಗಳ ನಂತರ ರಾಜಭವನ  ಪ್ರಕಟಣೆ ಬಂದಿದ್ದು, ಆಗಸ್ಟ್ 14 ಅನ್ನು ಹೊಸ ದಿನಾಂಕವೆಂದು ಉಲ್ಲೇಖಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com