ಒಂದಲ್ಲ, ಎರಡಲ್ಲ, 9 ಮದುವೆಯಾಗಿ ಮತ್ತೊಬ್ಬನೊಂದಿಗೆ ಪತ್ನಿ ಅನೈತಿಕ ಸಂಬಂಧ, ಕತ್ತು ಸೀಳಿ ಕೊಂದ 9ನೇ ಪತಿ!

ಒಂದೆರೆಡು ಮದುವೆಯಾಗಿ ನಿಭಾಯಿಸುವುದೇ ಕಷ್ಟ ಅಂತಹದರಲ್ಲಿ 30 ವರ್ಷದ ಮಹಿಳೆಯೊಬ್ಬರು ಬರೋಬ್ಬರಿ 9 ಮದುವೆಯಾಗಿ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಹಿನ್ನೆಲೆಯಲ್ಲಿ ಒಂಬತ್ತನೇ ಪತಿಯಿಂದ ಭೀಕರವಾಗಿ ಕೊಲೆಯಾಗಿದ್ದಾಳೆ. 

Published: 30th July 2020 01:16 PM  |   Last Updated: 30th July 2020 03:01 PM   |  A+A-


VaraLakshmi-Nagaraj

ವರಲಕ್ಷ್ಮಿ-ನಾಗರಾಜ್

Posted By : Vishwanath S
Source : Online Desk

ಹೈದರಾಬಾದ್: ಒಂದೆರೆಡು ಮದುವೆಯಾಗಿ ನಿಭಾಯಿಸುವುದೇ ಕಷ್ಟ ಅಂತಹದರಲ್ಲಿ 30 ವರ್ಷದ ಮಹಿಳೆಯೊಬ್ಬರು ಬರೋಬ್ಬರಿ 9 ಮದುವೆಯಾಗಿ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಹಿನ್ನೆಲೆಯಲ್ಲಿ ಒಂಬತ್ತನೇ ಪತಿಯಿಂದ ಭೀಕರವಾಗಿ ಕೊಲೆಯಾಗಿದ್ದಾಳೆ. 

30 ವರ್ಷದ ವರಲಕ್ಷ್ಮಿ ಎಂಬಾಕೆಯನ್ನು ಆಕೆಯ 9ನೇ ಪತಿ ನಾಗರಾಜ್ ಕೊಲೆ ಮಾಡಿದ್ದಾನೆ. ತೆಲಂಗಾಣದ ಪಹಾಡಿ ಶರೀಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಆರೋಪಿ ನಾಗರಾಜ್ ನನ್ನು ಬಂಧಿಸಿದ್ದು ವಿಚಾರಣ ನಡೆಸುತ್ತಿದ್ದಾರೆ. 

ಕರ್ನೂಲ್ ನಿವಾಸಿ ನಾಗರಾಜ್ ಕ್ಯಾಬ್ ಚಾಲಕನಾಗಿದ್ದ. ಮೃತ ವರಲಕ್ಷ್ಮಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದಳು. ಡಿಸೇಲ್ ಹಾಕಿಸಿಕೊಳ್ಳಲು ಬರುತ್ತಿದ್ದಾಗ ಇಬ್ಬರಿಗೂ ಪರಿಚಯವಾಗಿದೆ. ನಂತರ ಸ್ನೇಹ ಪ್ರೀತಿಯಾಗಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. 

ಮದುವೆಯಾಗಿ ಕೆಲ ದಿನ ಜೊತೆಗೆ ಕಳೆದ ನಂತರ ವರಲಕ್ಷ್ಮಿ ಮತ್ತೊಬ್ಬ ಪುರುಷನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ಬಗ್ಗೆ ತಿಳಿದ ನಾಗರಾಜ್ ಎಲ್ಲದರಿಂದ ದೂರವಿರುವಂತೆ ಎಚ್ಚರಿಸಿದ್ದನು. 

ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇದಕ್ಕೆ ವರಲಕ್ಷ್ಮಿ ಜಗದೆ ಇನ್ನೊಬ್ಬನೊಂದಿಗೆ ಮದುವೆಯಾಗಲು ಮುಂದಾಗಿದ್ದಾಳೆ ಎಂದು ತಿಳಿಯುತ್ತಿದ್ದಂತೆ ನಾಗರಾಜ್ ವರಲಕ್ಷ್ಮಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

Stay up to date on all the latest ರಾಷ್ಟ್ರೀಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp