ಪಾಕಿಸ್ತಾನದ 27 ಲಾಂಚ್ ಪ್ಯಾಡ್ ಸಕ್ರಿಯ: ಭಾರತಕ್ಕೆ ನುಸುಳಲು ಸಿದ್ದವಾಗಿದ್ದಾರೆ 320 ಭಯೋತ್ಪಾದಕರು!

ಪಾಕಿಸ್ತಾನವು ನಿಯಂತ್ರಣ ರೇಖೆಯ ಉದ್ದಕ್ಕೂ 27 ಲಾಂಚ್ ಪ್ಯಾಡ್‌ಗಳನ್ನು ಸಕ್ರಿಯಗೊಳಿಸಿದ್ದು, ಅಲ್ಲಿ 320 ಕ್ಕೂ ಹೆಚ್ಚು ಭಯೋತ್ಪಾದಕರು ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ ಎಂದು  ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಹೆಚ್ಚಿದ ಒಳನುಸುಳುವಿಕೆ ಪ್ರಯತ್ನಗಳ ಬಗ್ಗೆ ಏಜೆನ್ಸಿಗಳು ಎಚ್ಚರಿಕೆ ನೀಡಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪಾಕಿಸ್ತಾನವು ನಿಯಂತ್ರಣ ರೇಖೆಯ ಉದ್ದಕ್ಕೂ 27 ಲಾಂಚ್ ಪ್ಯಾಡ್‌ಗಳನ್ನು ಸಕ್ರಿಯಗೊಳಿಸಿದ್ದು, ಅಲ್ಲಿ 320 ಕ್ಕೂ ಹೆಚ್ಚು ಭಯೋತ್ಪಾದಕರು ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ ಎಂದು  ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಹೆಚ್ಚಿದ ಒಳನುಸುಳುವಿಕೆ ಪ್ರಯತ್ನಗಳ ಬಗ್ಗೆ ಏಜೆನ್ಸಿಗಳು ಎಚ್ಚರಿಕೆ ನೀಡಿವೆ.

ಅನೇಕ ಸಂಭಾಷಣೆಗಳನ್ನು ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (ರಾ) ತಡೆಹಿಡಿದಿದೆ ಮತ್ತು ಭಾರತ-ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಮುಖ್ಯವಾಗಿ  ಒಳನುಸುಳುವಿಕೆ ಬಗ್ಗೆ ಎಚ್ಚರಿಸಿದೆ.

ಕಳೆದ ವರ್ಷ 60 ಭಯೋತ್ಪಾದಕರು ಒಳನುಸುಳಿದ್ದರು, ಈ ವರ್ಷ 35 ಮಂದಿ ಉಗ್ರರು ಮಾತ್ರ ಭಾರತಕ್ಕೆ ನುಸುಳಿದ್ದಾರೆ,, 2020 ರ ಮೊದಲ ವರ್ಷದಲ್ಲಿ 429 ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ಕಳೆದ ವರ್ಷ ಇದೇ ಸಮಯಕ್ಕೆ 605 ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದವು.

ಈ ವಾರದ ಆರಂಭದಲ್ಲಿ, ನಿಯಂತ್ರಣ ರೇಖೆಯ ಉದ್ದಕ್ಕೂ ಜಾಗರೂಕತೆಯಿಂದಾಗಿ, ಕುಪ್ವಾರಾದಲ್ಲಿ ಭದ್ರತಾ ಪಡೆಗಳು ಪಿಕ್-ಅಪ್ ವಾಹನವನ್ನು ತಡೆದು ಅವರಿಂದ 10 ಕೆಜಿ ಬ್ರೌನ್ ಶುಗರ್ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದರು. ಜೊತೆಗೆ ಎಕೆ 47 ಮತ್ತು ಎರಡು ಮ್ಯಾಗ್ ಜೀನ್ ಹಾಗೂ 2 ಪಿಸ್ತೂಲ್  ಮತ್ತು 20 ಗ್ರೇನೆಡ್ ವಶಪಡಿಸಿಕೊಂಡಿದ್ದಾರೆ.

ಶಸ್ತ್ರಾಸ್ತ್ರ ಮತ್ತು ಗ್ರೆನೇಡ್‌ಗಳಲ್ಲಿ ಚೀನಾದ ಗುರುತುಗಳಿದ್ದು, ಇವುಗಳನ್ನು ಗಡಿಯಿಂದ ಸಾಗಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ,  ಈ ಶಸ್ತ್ರಾಸ್ತ್ರಗಳನ್ನು ದಕ್ಷಿಣ ಕಾಶ್ಮೀರದಲ್ಲಿ ಸ್ಪೋಟಿಸಲು ಸಾಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com