ಈಶಾನ್ಯ ಲಡಾಖ್ ನಲ್ಲಿ ಸೇನಾ ಸಿಬ್ಬಂದಿ ಹಿಂತೆಗೆತ ಪೂರ್ಣವಾಗಿಲ್ಲ: ಚೀನಾಗೆ ಭಾರತ

ಈಶಾನ್ಯ ಲಡಾಖ್ ನಲ್ಲಿ ಸೇನಾ ಸಿಬ್ಬಂದಿ ಹಿಂತೆಗೆತ ಪ್ರಕ್ರಿಯೆ ಪೂರ್ಣವಾಗಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಈಶಾನ್ಯ ಲಡಾಖ್ ನಲ್ಲಿ ಸೇನಾ ಸಿಬ್ಬಂದಿ ಹಿಂತೆಗೆತ ಪ್ರಕ್ರಿಯೆ ಪೂರ್ಣವಾಗಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. 

ಬಹುತೇಕ ಪ್ರದೇಶಗಳಲ್ಲಿ ಸೇನಾ ಸಿಬ್ಬಂದಿಗಳ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಚೀನಾ ಹೇಳಿಕೆಯ ಬೆನ್ನಲ್ಲೇ ಸ್ಪಷ್ಟತೆ ನೀಡಿರುವ ಭಾರತ ಸರ್ಕಾರ ಈ ಪ್ರಕ್ರಿಯೆ ಸಂಪೂರ್ಣವಾಗಿಲ್ಲ ಎಂದು ಹೇಳಿದೆ.

ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಚೀನಾದೊಂದಿಗೆ  ಮತ್ತೊಂದು ಸುತ್ತಿನ ಲೆಫ್ಟಿನೆಂಟ್ ಜನರಲ್ ಮಟ್ಟದ ಮಾತುಕತೆಗೂ ಮುನ್ನ ಭಾರತದ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಮೂಲಗಳ ಪ್ರಕಾರ ಇನ್ನೆರಡು ದಿನಗಳಲ್ಲಿ ಭಾರತ-ಚೀನಾದ ನಡುವೆ ಮತ್ತೊಂದು ಸುತ್ತಿನ ಲೆಫ್ಟಿನೆಂಟ್ ಜನರಲ್ ಮಟ್ಟದ ಮಾತುಕತೆ ನಡೆಯಲಿದೆ. 

ಸೇನಾ ಸಿಬ್ಬಂದಿ ಹಿಂತೆಗೆತ ಉದ್ದೇಶದೆಡೆಗೆ ಮಹತ್ವದ ಪ್ರಗತಿಗಳಾಗಿವೆ ಅಂದಮಾತ್ರಕ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ ಎನ್ನುವುದಕ್ಕಾಗಿ ಹೇಳಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನರಾಗ್ ಶ್ರೀವಾಸ್ತವ ಆನ್ ಲೈನ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ. 

ಇದೇ ವೇಳೆ ಚೀನಾದ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು ಸೇನಾ ಹಿಂತೆಗೆತದ ಕುರಿತು ಸದ್ಯದಲ್ಲೇ ಹಿರಿಯ ಕಮಾಂಡರ್ ಗಳು ಭೇಟಿ ಮಾಡಲಿದ್ದಾರೆ. ಚೀನಾ ನಮ್ಮೊಂದಿಗೆ ಪ್ರಾಮಾಣಿಕವಾಗಿ ನಡೆದುಕೊಳ್ಳುವ ವಿಶ್ವಾಸವಿದೆ ಎಂದು ಭಾರತ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com