73 ವರ್ಷದ ಬಳಿಕ ಮೊದಲ ಬಾರಿ ಸ್ವಾತಂತ್ರೋತ್ಸವ ವೀಕ್ಷಿಸಲಿರುವ ದೇಶದ ಕಟ್ಟ ಕಡೇಯ ಗ್ರಾಮ

ಸ್ವಾತಂತ್ರ್ಯ ಬಂದ 72 ವರ್ಷಗಳ ನಂತರ ಮೊದಲ ಬಾರಿಗೆ, ಉತ್ತರ ಕಾಶ್ಮೀರದ ನಿಯಂತ್ರಣ ರೇಖೆಯಬಳಿಯ ಕೊನೆಯ ಗ್ರಾಮವು ಪ್ರಧಾನ ಮಂತ್ರಿಯ ಆಗಸ್ಟ್ 15 ರ ಕೆಂಪು ಕೋಟೆಯಿಂದ ಮಾಡುವ ಭಾಷಣವನ್ನು ನೇರಪ್ರಸಾರದಲ್ಲಿ ವೀಕ್ಷಿಸಲಿದೆ.
73 ವರ್ಷದ ಬಳಿಕ ಮೊದಲ ಬಾರಿ ಸ್ವಾತಂತ್ರೋತ್ಸವ ವೀಕ್ಷಿಸಲಿರುವ ದೇಶದ ಕಟ್ಟ ಕಡೇಯ ಗ್ರಾಮ

ನವದೆಹಲಿ: ಸ್ವಾತಂತ್ರ್ಯ ಬಂದ 72 ವರ್ಷಗಳ ನಂತರ ಮೊದಲ ಬಾರಿಗೆ, ಉತ್ತರ ಕಾಶ್ಮೀರದ ನಿಯಂತ್ರಣ ರೇಖೆಯಬಳಿಯ ಕೊನೆಯ ಗ್ರಾಮವು ಪ್ರಧಾನ ಮಂತ್ರಿಯ ಆಗಸ್ಟ್ 15 ರ ಕೆಂಪು ಕೋಟೆಯಿಂದ ಮಾಡುವ ಭಾಷಣವನ್ನು ನೇರಪ್ರಸಾರದಲ್ಲಿ ವೀಕ್ಷಿಸಲಿದೆ.

ಕಳೆದ 72 ವರ್ಷಗಳಿಂದ, 12,000 ಕುಟುಂಬಗಳನ್ನು ಹೊಂದಿರುವ ಕೇರನ್ ಗ್ರಾಮದಲ್ಲಿ ಡೀಸೆಲ್ ಜನರೇಟರ್ ಸೆಟ್ ಮೂಲಕ ಸಂಜೆ 6 ರಿಂದ 9 ರವರೆಗೆ ಸಂಜೆ ಮೂರು ಗಂಟೆಗಳ ಕಾಲ ಮಾತ್ರ ವಿದ್ಯುತ್  ನೀಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ದಿನದಂದು ಅವರಿಗೆ  ಬೆಳಿಗ್ಗೆ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ದೊರಕಲಿದೆ. ಗ್ರಾಮವನ್ನು ತಲುಪುವ ಪವರ್ ಗ್ರಿಡ್ ಅವರಿಗೆ 24 ಗಂಟೆಗಳ ಕಾಲ ವಿದ್ಯುತ್ ಒದಗಿಸುವುದಲ್ಲದೆ ಗ್ರಾಮವನ್ನು ಶಬ್ದ ಹಾಗೂ ಮಾಲಿನ್ಯದಿಂದ ಮುಕ್ತವನ್ನಾಗಿಸಲಿದೆ.

"ಕಳೆದ ಒಂದು ವರ್ಷದಿಂದ ನಾವು ಈ ಗಡಿ ಪ್ರದೇಶದ ವಿದ್ಯುದ್ದೀಕರಣದ ಕೆಲಸವನ್ನು ಶೀಘ್ರ ವ್ವೇಗದಲ್ಲಿ ನಡೆಸಿದ್ದೇವೆ.  ಈಗ ನಾವು ನಮ್ಮ ಗುರಿಯನ್ನು ಸಾಧಿಸಿದ್ದೇವೆ" ಎಂದು ಕುಪ್ವಾರಾ ಜಿಲ್ಲಾಧಿಕಾರಿ ಅನ್ಶುಲ್ ಗರ್ಗ್ ಹೇಳಿದ್ದಾರೆ

ಇನ್ನು ಗ್ರಾಮದಲ್ಲಿ ವಿದ್ಯುದೀಕರಣ ಮಾತ್ರವಲ್ಲದೆ ರಸ್ತೆಗಳನ್ನು ಸಹ ಸುಧಾರಣೆಗೆ ಸಹ ಸ್ಥಳೀಯ ಆಡಳಿತ ಮುಂದಾಗಿದೆ. ಕಿಶನ್ ಗಂಗಾ ನದಿಯ ದಂಡೆಯಲ್ಲಿರುವ ಕೇರನ್ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ವ್ಯಾಪ್ತಿಯಲ್ಲಿದ್ದು  ಕಠಿಣ ಚಳಿಗಾಲದ ಅವಧಿಯಲ್ಲಿ ಮುಖ್ಯ ಭೂಪ್ರದೇಶದಿಂದ  ಸುಮಾರು ಆರು ತಿಂಗಳ ಕಾಲ ಸಂಪರ್ಕದಿಂದ ದೂರವಾಗುತ್ತದೆ. "ಈ ವರ್ಷ, ಚಳಿಗಾಲವು ಪ್ರಾರಂಭವಾಗುವ ಮೊದಲು ಮ್ಯಾಕಾಡಮೈಸ್ಡ್ ರಸ್ತೆಗಳನ್ನು ಪೂರ್ಣಗೊಳಿಸುವ ಕಾರ್ಯವನ್ನು ಬಿಆರ್ಒ (ಬಾರ್ಡರ್ ರೋಡ್ಸ್ ಆರ್ಗನೈಸೇಶನ್) ನೀಡಿದೆ" ಎಂದು ಯಂಗ್  2013 ಬ್ಯಾಚ್ ಅಧಿಕಾರಿ ಗರ್ಗ್ ಹೇಳಿದ್ದಾರೆ.

ಕುಪ್ವಾರಾ 170 ಕಿ.ಮೀ.ನಷ್ಟು ನಿಯಂತ್ರಣ ರೇಖೆಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡಿದೆ ಮತ್ತು ಒಳನುಸುಳುವಿಕೆ ಮಾರ್ಗಗಳಿಗೆ ಹೆಸರುವಾಸಿಯಾಗಿದೆ. ಐದು ವಿಧಾನಸಭೆ ಕ್ಷೇತ್ರ ಹಾಗೂ 356 ಪಂಚಾಯಿತಿಗಳು ಇಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com