ಚೈನಾ ವಸ್ತುಗಳು ನಿಷೇಧಿಸಬೇಕು.. ಆ ದೇಶವನ್ನು ದ್ವೇಷಿಸ ಬೇಕಿಲ್ಲ

ಚೈನಾ ವಸ್ತುಗಳ ಬಳಕೆ ಕೈಬಿಡಬೇಕು, ಆ ದೇಶದ ಯಾವುದೇ ಎಲ್ಲಾ ವಸ್ತುಗಳನ್ನು ನಿಷೇಧಿಸಬೇಕು ಎಂದು ಲಡಾಖ್ ಇಂಜನಿಯರ್ ಸೋನಂ ವಾಂಗ್ ಚುಕ್ ಇತ್ತೀಚಿಗೆ ಹೇಳಿದ್ದರು.
ಚೈನಾ ವಸ್ತುಗಳು ನಿಷೇಧಿಸಬೇಕು.. ಆ ದೇಶವನ್ನು ದ್ವೇಷಿಸ ಬೇಕಿಲ್ಲ
ಚೈನಾ ವಸ್ತುಗಳು ನಿಷೇಧಿಸಬೇಕು.. ಆ ದೇಶವನ್ನು ದ್ವೇಷಿಸ ಬೇಕಿಲ್ಲ

ಶ್ರೀನಗರ: ಚೈನಾ ವಸ್ತುಗಳ ಬಳಕೆ ಕೈಬಿಡಬೇಕು, ಆ ದೇಶದ ಯಾವುದೇ ಎಲ್ಲಾ ವಸ್ತುಗಳನ್ನು ನಿಷೇಧಿಸಬೇಕು ಎಂದು ಲಡಾಖ್ ಇಂಜನಿಯರ್ ಸೋನಂ ವಾಂಗ್ ಚುಕ್ ಇತ್ತೀಚಿಗೆ ಹೇಳಿದ್ದರು.

ತಮ್ಮ ಈ ಹೇಳಿಕೆಯ ಬಗ್ಗೆ ಇಂದು ಅವರು ಸ್ಪಷ್ಟನೆ ನೀಡಿದ್ದಾರೆ. ನಾನು ಚೈನಾ ವಸ್ತುಗಳನ್ನು ನಿಷೇಧಿಸಬೇಕು ಎಂದು ಜನರಿಗೆ ಕರೆ ನೀಡಿದ್ದೇನೆ. ಆದರೆ ಆ ದೇಶವನ್ನು ದ್ವೇಷಿಸಿ ಎಂದು ಕರೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಚೈನಾ ಸರ್ಕಾರ ಮಾಡುತ್ತಿರುವ ತಪ್ಪುಗಳಿಗೆ ಅಲ್ಲಿನ ಜನರಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಅವರನ್ನು ದ್ವೇಷಿಸುವ ಅಗತ್ಯವಿಲ್ಲ. ಕೇವಲ ಅಲ್ಲಿನ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಆ ದೇಶದ ವಸ್ತುಗಳನ್ನು ಬಳಸದಿರಲು ಕರೆ ನೀಡಿರುವೆ   ಎಂದು ವಾಂಗ್ ಚುಕ್ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com