ರೈತರು, ಎಂಎಸ್‌ಎಂಇಗಳಿಗೆ ಎರಡು ಪ್ಯಾಕೇಜ್‌ಗಳ ಜಾರಿಗೆ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

ಎರಡು ತಿಂಗಳ ಕಠಿಣ ಕೊರೋನಾವೈರಸ್ ಲಾಕ್ ಡೌನ್ ನಂತರ ದೇಶ ಅನ್ ಲಾಕ್ ನತ್ತ ಹೊರಳುತ್ತಿರುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ಬಹು ನಿರೀಕ್ಷಿತ  ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. 
ಕೇಂದ್ರ ಸಂಪುಟ ಸಭೆ
ಕೇಂದ್ರ ಸಂಪುಟ ಸಭೆ

ನವದೆಹಲಿ: ಎರಡು ತಿಂಗಳ ಕಠಿಣ ಕೊರೋನಾವೈರಸ್ ಲಾಕ್ ಡೌನ್ ನಂತರ ದೇಶ ಅನ್ ಲಾಕ್ ನತ್ತ ಹೊರಳುತ್ತಿರುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ಬಹು ನಿರೀಕ್ಷಿತ  ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. 

ಎನ್ ಡಿಎ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷ ತುಂಬಿದ ಬಳಿಕ ನಡೆದ ಮೊದಲ ಸಂಪುಟ ಸಭೆ ಇದಾಗಿತ್ತು. ಸಂಪುಟ ಸಭೆಯ ಬಳಿಕ ಕೈಗೊಳ್ಳಲಾದ ನಿರ್ಣಯಗಳ ಕುರಿತು ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಹಾಗೂ ನಿತಿನ್ ಗಡ್ಕರಿ ವಿಸ್ತೃತ ಮಾಹಿತಿ ನೀಡಿದ್ದರು.

ಎಂಎಸ್‌ಎಂಇಗಳಿಗೆ ಎರಡು ಪ್ಯಾಕೇಜ್‌ಗಳ ಜಾರಿಗಾಗಿ ಕಾರ್ಯವಿಧಾನಗಳು ಮತ್ತು ಮಾರ್ಗನಕ್ಷೆಗೆ ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ. ಎಂಎಸ್ ಎಂಇಗಳಿಗೆ  20 ಸಾವಿರ ಕೋಟಿ ರೂ.ಗಳ ಅಧೀನ ಸಾಲಕ್ಕೆ ಅನುಮೋದನೆ ನೀಡಲಾಗಿದೆ.ಇದರಿಂದ 2 ಲಕ್ಷ ಸಂಕಷ್ಟಕ್ಕೊಳಗಾಗಿರುವ ಸಣ್ಣ ಉದ್ಯಮಿಗಳಿಗೆ ನೆರವಾಗಲಿದೆ ಎಂದರು. ಆತ್ಮನಿರ್ಭರ್ ಭಾರತ್ ಪ್ಯಾಕೇಜ್' ಮೂಲಕ ಎಂಎಸ್‌ಎಂಇ ವಲಯಕ್ಕೆ ಶಕ್ತಿ ತುಂಬಲು ಈ ಕ್ರಮ ಹಾದಿ ಮಾಡಿಕೊಡಲಿದೆ ಎಂದು ಗಡ್ಕರಿ ಹೇಳಿದರು.

ಮಧ್ಯಮ ಉದ್ಯಮಗಳ ವಹಿವಾಟು ಮಿತಿಯನ್ನು 250 ಕೋಟಿ ರೂ.ಗೆ ತಿದ್ದುಪಡಿ ಮಾಡಲಾಗಿದ್ದು, ಹೂಡಿಕೆ ಮಿತಿಯನ್ನು 50 ಕೋಟಿ ರೂ.ಗೆ ಏರಿಸಲಾಗಿದೆ ಎಂದು ಜಾವಡೇಕರ್ ಹೇಳಿದ್ದಾರೆ.

ಕೃಷಿಕ ಸಮುದಾಯದ ಕಲ್ಯಾಣಕ್ಕಾಗಿ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.ರೈತರಿಗೆ ಪರಿಹಾರ ಒದಗಿಸಲು 14 ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳು (ಎಂಎಸ್‌ಪಿ) ಶೇ. 50 ರಿಂದ ಶೇ.83ರಷ್ಟು ಹೆಚ್ಚಳ ಮಾಡಲಾಗಿದೆ. ರೈತರು ತಾವು ತೆಗೆದುಕೊಂಡಿರುವ ಸಾಲ ಮರುಪಾವತಿಸಲು ಆಗಸ್ಟ್ ವರೆಗೂ ಗಡುವು ನೀಡಲಾಗಿದೆ ಎಂದು ತಿಳಿಸಿದರು. 

ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಹಾಗೂ ಬೀದಿ ವ್ಯಾಪಾರಿಗಳಿಗೆ ಸಾಲದ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com