ಜಮ್ಮು ಮತ್ತು ಕಾಶ್ಮೀರ: ಉಗ್ರರ ಅಡಗುದಾಣದ ಮೇಲೆ ದಾಳಿ, ಜೆಇಎಂ ಉಗ್ರ ಸಂಘಟನೆಗೆ ಸೇರಿದ 6 ಶಂಕಿತರ ಬಂಧನ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಮಾದಕ ವಸ್ತು ಭಯೋತ್ಪಾದನೆ ಅಡಗುದಾಣದ ಮೇಲೆ ಪೊಲೀಸರು ದಾಳಿ ಮಾಡಿದ್ದು, ಜೈಷ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರಿದ 6 ಶಂಕಿತ ಉಗ್ರರನ್ನು ಬಂಧಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬದ್ಗಾಮ್: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಮಾದಕ ವಸ್ತು ಭಯೋತ್ಪಾದನೆ ಅಡಗುದಾಣದ ಮೇಲೆ ಪೊಲೀಸರು ದಾಳಿ ಮಾಡಿದ್ದು, ಜೈಷ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರಿದ 6 ಶಂಕಿತ ಉಗ್ರರನ್ನು ಬಂಧಿಸಲಾಗಿದೆ.

ಬದ್ಗಾಮ್ ಪೊಲೀಸರು ಈ ದಾಳಿ ನಡೆಸಿದ್ದು, ದಾಳಿ ವೇಳೆ ಆರು ಶಂಕಿತ ಉಗ್ರರು ಮತ್ತು ಅವರಿಂದ ಒಂದು ಪಿಸ್ತೂಲು 4 ಬುಲೆಟ್ ಗಳು, ಒಂದು ಮ್ಯಾಗಜಿನ್, 1.55 ಲಕ್ಷ ರೂ ನಗದು ಮತ್ತು 1 ಕೆಜಿ ಮಾದಕವಸ್ತುವನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕೂಡ ಟ್ವೀಟ್ ಮಾಡಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ಪಾಕಿಸ್ತಾನ ಗಡಿಯಿಂದ ಭಾರತದ ಗಡಿಯೊಳಗೆ ಒಳ ನುಸುಳುತ್ತಿದ್ದ 3 ಮಂದಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರದೊಂದಿಗೆ ಒಳ ನುಸುಳುತ್ತಿದ್ದರು. ಇದನ್ನು ಗಮನಿಸಿದ್ದ ಸೇನೆ ನೌಶೇರಾ ಸೆಕ್ಟರ್ ನಲ್ಲಿ ಹೊಡೆದುರುಳಿಸಿತ್ತು. ಇನ್ನು ಸೇನೆ ಕೂಡ ನಿನ್ನೆ ಪಿಒಕೆಯಲ್ಲಿನ ಉಗ್ರ ಶಬಿರಗಳು  ತುಂಬಿದ್ದು, ಉಗ್ರರು ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಪಾಕ್ ಸೇನೆಯ ಬೆಂಬಲವಿದ್ದು, ಇದೇ ಕಾರಣಕ್ಕೆ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡತ್ತಿದೆ ಎಂದು ಆರೋಪಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com