ಕೋವಿಡ್-19 ಸವಾಲಿನ ನಡುವೆಯೂ ರಾಫೆಲ್ ಜೆಟ್ ಗಳು ಸೂಕ್ತ ಸಮಯಕ್ಕೆ ತಲುಪಲಿವೆ: ರಾಜನಾಥ್ ಸಿಂಗ್ 

ಕೋವಿಡ್-19 ರ ಸವಾಲಿನ ನಡುವೆಯೂ ಫ್ರಾನ್ಸ್ ರಾಫೆಲ್ ಜೆಟ್ ಗಳನ್ನು ಸೂಕ್ತ ಸಮಯಕ್ಕೆ ತಲುಪಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 

Published: 02nd June 2020 04:43 PM  |   Last Updated: 02nd June 2020 04:43 PM   |  A+A-


Rafel jet

ರಾಫೆಲ್ ಜೆಟ್

Posted By : Srinivas Rao BV
Source : The New Indian Express

ನವದೆಹಲಿ: ಕೋವಿಡ್-19 ರ ಸವಾಲಿನ ನಡುವೆಯೂ ಫ್ರಾನ್ಸ್ ರಾಫೆಲ್ ಜೆಟ್ ಗಳನ್ನು ಸೂಕ್ತ ಸಮಯಕ್ಕೆ ತಲುಪಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 

ಫ್ರಾನ್ಸ್ ನ ರಕ್ಷಣಾ ಸಚಿವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ನಂತರ ರಾಜನಾಥ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ದೂರವಾಣಿ ಸಂಭಾಷಣೆಯಲ್ಲಿ ಉಭಯ ನಾಯಕರೂ ಕೋವಿಡ್-19, ಪ್ರಾದೇಶಿಕ ಭದ್ರತೆ ಸೇರಿಂದತೆ ಪರಸ್ಪರ ಕಾಳಜಿಯ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. 

ಫ್ರಾನ್ಸ್ ನ ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ, ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಉತ್ತಮಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. 

ಫ್ರಾನ್ಸ್ ಕೋವಿಡ್-19 ಸವಾಲಿನ ಸಂದರ್ಭದಲ್ಲೂ ಸೂಕ್ತ ಸಮಯಕ್ಕೆ ರಾಫೆಲ್ ಜೆಟ್ ಗಳನ್ನು ಭಾರತಕ್ಕೆ ತಲುಪಿಸಲು ಬದ್ಧವಾಗಿದೆ. ಮೊದಲ ನಾಲ್ಕು ರಾಫೆಲ್ ಫೈಟರ್ ಜೆಟ್ ಗಳು ಜುಲೈ ಅಂತ್ಯದ ವೇಳೆಗೆ ಭಾರತಕ್ಕೆ ಬರಲಿವೆ. ಮೇ ಅಂತ್ಯಕ್ಕೆ ಬರಬೇಕಿತ್ತಾದರೂ ಕೋವಿಡ್-19 ಕಾರಣದಿಂದ ವಿಳಂಬವಾಗಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp