ಮೋದಿ ಸರ್ಕಾರದ ಆರ್ಥಿಕತೆಗೆ ಮೂಡೀಸ್ ನಿಂದ ’ಕಳಪೆಗಿಂತ ಮೇಲಿನ ಹಂತದ ರೇಟಿಂಗ್': ರಾಹುಲ್

ಭಾರತದ ಆರ್ಥಿಕತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಾಗತಿಕ ರೇಟಿಂಗ್ ಏಜೆನ್ಸಿ ಮೂಡಿಸ್ 'ಕಳಪೆಗಿಂತ ಕೇವಲ ಒಂದು ಹಂತ ಮೇಲೆ’ ಎಂದು ಹೇಳಿದೆ ಎಂದಿದ್ದಾರೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಭಾರತದ ಆರ್ಥಿಕತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಾಗತಿಕ ರೇಟಿಂಗ್ ಏಜೆನ್ಸಿ ಮೂಡಿಸ್ 'ಕಳಪೆಗಿಂತ ಕೇವಲ ಒಂದು ಹಂತ ಮೇಲೆ’ ಎಂದು ಹೇಳಿದೆ ಎಂದಿದ್ದಾರೆ. 

ಸಣ್ಣ, ಮಧ್ಯಮ ಕೈಗಾರಿಕೆಗಳು, ಬಡವರಿಗೆ ಕಡಿಮೆ ನೆರವು ನೀಡುರುವುದರಿಂದ ಮತ್ತಷ್ಟು ಕೆಟ್ಟ ಪರಿಸ್ಥಿತಿ ಬರಲಿದೆ ಎಂಬುದನ್ನು ಸೂಚಿಸಲಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಎಚ್ಚರಿಸಿದ್ದಾರೆ. 

ಕಳೆದ ಎರಡು ದಶಕಗಳಲ್ಲೇ ಮೊದಲ ಬಾರಿಗೆ ಮೂಡೀಸ್ ಇನ್ವೆಸ್ಟರ್ ಸರ್ವೀಸ್ ಭಾರತದ ಕ್ರೆಡಿಟ್ ರೇಟಿಂಗ್ ನ್ನು ಕಡಿಮೆ ಮಾಡಿದ್ದು, ನೀತಿ ರೂಪಿಸುವವರು ಕಡಿಮೆ ಬೆಳವಣಿಗೆಯ ಅಪಾಯಗಳನ್ನು ತಗ್ಗಿಸುವ ಸವಾಲನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ. 

ಬಿಎಎ2 ಯಿಂದ ಬಿಎಎ3 ಗೆ ಭಾರತದ ರೇಟಿಂಗ್ ನ್ನು ಮೂಡೀಸ್ ಇನ್ವೆಸ್ಟರ್ ಸರ್ವೀಸ್ ಇಳಿಕೆ ಮಾಡಿದ್ದು ನಾಲ್ಕು ದಶಕಗಳಲ್ಲೇ ಮೊದಲ ಬಾರಿಗೆ ಜಿಡಿಪಿ ದರವನ್ನು ಶೇ.4 ರಷ್ಟು ಕುಸಿತ ಕಾಣಲಿದೆ ಎಂದು ಅಂದಾಜಿಸಿದೆ. 

ಬಿಎಎ3 ರೇಟಿಂಗ್ ಅತ್ಯಂತ ಕಡಿಮೆ ಹೂಡಿಕೆ ಗ್ರೇಡ್ ಆಗಿದ್ದು, ಕಳಪೆಗಿಂತ ಕೇವಲ ಒಂದು ಹಂತ ಮೇಲಿನದ್ದಾಗಿದೆ. ಈ ರೀತಿ ಭಾರತದ ರೇಟಿಂಗ್ ನ್ನು 1998 ರಲ್ಲಿ ಮೂಡಿಸ್ ಇಳಿಕೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com