ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಲಾಗದೆ ಹತಾಶೆ: 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ!

ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅಗತ್ಯ ಸೌಲಭ್ಯಗಳಿಲ್ಲದ ಕಾರಣ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ವಾಲಂಚೇರಿ ಎಂಬಲ್ಲಿ ನಡೆದಿದೆ. 

Published: 02nd June 2020 12:17 PM  |   Last Updated: 02nd June 2020 01:47 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : The New Indian Express

ಮಲಪ್ಪುರಂ:  ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅಗತ್ಯ ಸೌಲಭ್ಯಗಳಿಲ್ಲದ ಕಾರಣ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ವಾಲಂಚೇರಿ ಎಂಬಲ್ಲಿ ನಡೆದಿದೆ. 

ವೀಲಾಚೆರಿ ಬಳಿಯ ಮಂಗೇರಿ ನಿವಾಸಿ ಬಾಲಕೃಷ್ಣನ್ ಮತ್ತು ಶೀಬಾ ಅವರ ಪುತ್ರಿ ದೇವಿಕಾ (14) ಆತ್ಮಹತ್ಯೆ ಮಾಡಿಕೊಂಡ ಬಾಲಕಿಯಾಗಿದ್ದು ಈಕೆ ಇರಿಂಬಿಳಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದರಳು.

ಸೋಮವಾರ ಸಂಜೆ 4 ಗಂಟೆಯ ನಂತರ ಬಾಲಕಿ ನಾಪತ್ತೆಯಾಗಿದ್ದು ಆಕೆಯ ಶವವನ್ನು ಮನೆಯಿಂದ  100 ಮೀಟರ್ ದೂರದಲ್ಲಿ ಪತ್ತೆ ಮಾಡಲಾಗಿದೆ. ವಿಚಾರಣೆ ಬಳಿಕವಷ್ಟೇ  ಸಾವಿನ ಹಿಂದಿನ ಕಾರಣವನ್ನು ಖಚಿತಪಡಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

"ತನಿಖೆ ಮತ್ತು ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ಬಹಿರಂಗಗೊಳ್ಳುತ್ತವೆ" ಎಂದು ವಾಲಂಚೇರಿ ಸರ್ಕಲ್ ಇನ್ಸ್‌ಪೆಕ್ಟರ್ ಶಾಜಿ ಎಂ ಕೆ ಹೇಳಿದರು.

ಇತ್ತ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ತಮ್ಮ ಮನೆಯಲ್ಲಿ ಸೌಲಭ್ಯಗಳಿಲ್ಲದ ಕಾರಣ ಮಗಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೋಷಕರು ತಿಳಿಸಿದ್ದಾರೆ.ದೇವಿಕಾ ಬುದ್ದಿವಂತೆಯಾಗಿದ್ದಳು. ಆಕೆ ಹತ್ತನೇ ತರಗತಿಯಲ್ಲಿ ಒಂದೂ ತರಗತಿಗೆ ಗೈರಾಗಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ದೇವಿಕಾ ಪೋಷಕರು ಸ್ಮಾರ್ಟ್ ಫೋನ್ ಬಳಕೆ ಮಾಡುವುದಿಲ್ಲ. ಅವರ ಮನೆಯ ಟಿವಿ ಸಹ ರಿಪೇರಿಯಾಗಬೇಕಿದೆ.

"ಅವಳು ಬೇರೆ ಯಾವುದೇ ಸಮಸ್ಯೆಗಳನ್ನು ಹೊಂದಿರಲಿಲ್ಲ. ಅವಳು ಅದ್ಭುತ ಜಾಣ ವಿದ್ಯಾರ್ಥಿನಿಯಾಗಿದ್ದಳು.  ಶಿಕ್ಷಕರು ಅವಳ ಬಗ್ಗೆ ತುಂಬಾ ಹೆಮ್ಮೆಯಿಂದ ಇದ್ದರು. ನಾವು ಟಿವಿಯನ್ನು ಶೀಘ್ರ ರಿಪೇರಿ ಮಾಡಿಕೊಡುವುದಾಗಿ ಅವಳಿಗೆ ಹೇಳೀದ್ದೆವು.  ಶಾಲೆಗಳು ನಿಮಗೆ ಟ್ಯಾಬ್ಲೆಟ್ ಕಂಪ್ಯೂಟರ್ ಅನ್ನು ಒದಗಿಸಬಹುದು ಎನ್ನಲಾಗಿತ್ತು. ಆದರೆ ಮನೆಯಲ್ಲಿ ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಅಸಮರ್ಪಕ ಸೌಲಭ್ಯ ಸಿಕ್ಕದೆ ಮಗಳು ಸಾವಿಗೀಡಾಗಿದ್ದೇಳೆ" ಆಕೆಯ ಪೋಷಕರು ಹೇಳಿದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp