ತೆಲಂಗಾಣ: ಹೊಲದಲ್ಲಿ ಉಳುಮೆ ಮಾಡುತ್ತಿದ್ದ ರೈತನಿಗೆ ಸಿಕ್ಕಿತು ಚಿನ್ನ, ಬೆಳ್ಳಿ ತುಂಬಿದ 2 ಮಡಕೆ!

ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ರೈತನಿಗೆ ಚಿನ್ನ ಹಾಗೂ ಬೆಳ್ಳಿ ಆಭರಣ ತುಂಬಿದ ಎರಡು ಮಡಕೆಗಳು ಸಿಕ್ಕಿದ್ದು, ಅದರಲ್ಲಿ 25ಕ್ಕೂ ಹೆಚ್ಚು ಒಡವೆಗಳು ಪತ್ತೆಯಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ರೈತನಿಗೆ ಚಿನ್ನ ಹಾಗೂ ಬೆಳ್ಳಿ ಆಭರಣ ತುಂಬಿದ ಎರಡು ಮಡಕೆಗಳು ಸಿಕ್ಕಿದ್ದು, ಅದರಲ್ಲಿ 25ಕ್ಕೂ ಹೆಚ್ಚು ಒಡವೆಗಳು ಪತ್ತೆಯಾಗಿವೆ.

ತೆಲಂಗಾಣದ ವಿಕಾರಬಾದ್ ಜಿಲ್ಲೆಯ ಸುಲ್ತಾನ್ ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೊಹಮ್ಮ ಸಿದ್ಧಿಕಿ ಎಂಬ ರೈತ ಎರಡು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ತುಂಡು ಭೂಮಿಯನ್ನು ಖರೀದಿಸಿದ್ದರು. ರಾಜ್ಯದಲ್ಲಿ ಈಗ ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ಬೀಜ ಬಿತ್ತಲು ಇಂದು ಬೆಳಗ್ಗೆ ಹೊಲ ಸಿದ್ಧಗೊಳಿಸುತ್ತಿದ್ದರು. ಈ ವೇಳೆ ಚಿನ್ನ ಹಾಗೂ ಬೆಳ್ಳಿ ಆಭರಣ ತುಂಬಿದ ಎರಡು ಮಡಕೆಗಳು ಪತ್ತೆಯಾಗಿದ್ದು, ರೈತ ಕೂಡಲೇ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕಂದಾಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿದ್ದು, ಈ ಆಭರಣಗಳು ಚಿನ್ನ ಮತ್ತು ಬೆಳ್ಳಿಯ ವಸ್ತುಗಳೇ ಎಂಬುದನ್ನು ಪರಿಶೀಲಿಸುವಂತೆ ಅಕ್ಕಸಾಲಿಗನಿಗೆ ಸೂಚಿಸಿದ್ದಾರೆ.

ಈ ಕುರಿತು ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಮಂಡಲ ಕಂದಾಯ ಅಧಿಕಾರಿ ವಿದ್ಯಾಸಾಗರ್ ರೆಡ್ಡಿ, "ಈ ಸ್ಥಳವು ಯಾವುದೇ ನಿಧಿ ಪತ್ತೆಯಾಗುವ ಇತಿಹಾಸವನ್ನು ಹೊಂದಿಲ್ಲ. ಈ ಬಗ್ಗೆ ನಾವು ಪುರಾತತ್ವ ಇಲಾಖೆಗೆ ತಿಳಿಸುತ್ತೇವೆ" ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com