ನಿಸರ್ಗ ಚಂಡಮಾರುತ: 'ಜೀವಹಾನಿ ತಪ್ಪಿಸಲು ಮುಂಬೈ ಪೊಲೀಸರಿಂದ ಸೆಕ್ಷನ್ 144 ಜಾರಿ'

ನಿಸರ್ಗ ಚಂಡಮಾರುತ ಮಹಾರಾಷ್ಟ್ರ ರಾಜ್ಯದ ಉತ್ತರ ಕರಾವಳಿ ಭಾಗಕ್ಕೆ ಗಂಟೆಗೆ 13 ಕಿಲೋ ಮೀಟರ್ ವೇಗದಲ್ಲಿ ಸಮೀಪಿಸುತ್ತಿದ್ದು ಬುಧವಾರ ಮಧ್ಯಾಹ್ನದ ಹೊತ್ತಿಗೆ ಅಪ್ಪಳಿಸಲಿದೆ. ಚಂಡಮಾರುತ ಅಲಿಬಾಗ್‌ನ ದಕ್ಷಿಣ-ನೈರುತ್ಯಕ್ಕೆ 155 ಕಿಲೋ ಮೀಟರ್ ಮತ್ತು ಮುಂಬೈಯಿಂದ ನೈರುತ್ಯಕ್ಕೆ 200 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತದ ಭೀತಿ ತೋರಿಸುವ ಚಿತ್ರ ನಿರ್ಮಾಣ
ಚಂಡಮಾರುತದ ಭೀತಿ ತೋರಿಸುವ ಚಿತ್ರ ನಿರ್ಮಾಣ

ಮುಂಬೈ: ನಿಸರ್ಗ ಚಂಡಮಾರುತ ಮಹಾರಾಷ್ಟ್ರ ರಾಜ್ಯದ ಉತ್ತರ ಕರಾವಳಿ ಭಾಗಕ್ಕೆ ಗಂಟೆಗೆ 13 ಕಿಲೋ ಮೀಟರ್ ವೇಗದಲ್ಲಿ ಸಮೀಪಿಸುತ್ತಿದ್ದು ಬುಧವಾರ ಮಧ್ಯಾಹ್ನದ ಹೊತ್ತಿಗೆ ಅಪ್ಪಳಿಸಲಿದೆ. ಚಂಡಮಾರುತ ಅಲಿಬಾಗ್‌ನ ದಕ್ಷಿಣ-ನೈರುತ್ಯಕ್ಕೆ 155 ಕಿಲೋ ಮೀಟರ್ ಮತ್ತು ಮುಂಬೈಯಿಂದ ನೈರುತ್ಯಕ್ಕೆ 200 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದರ ಪರಿಣಾಮ ಹಗುರದಿಂದ ಕೂಡಿದ ಭಾರೀ ಮಳೆ ಕರ್ನಾಟಕದ ತೀರಭಾಗ ಮತ್ತು ಮರಟಾವಾಡಗಳಲ್ಲಿ ಮುಂದಿನ 6 ಗಂಟೆಗಳಲ್ಲಿ ಸುರಿಯಲಿದೆ. ಉತ್ತರ ಕೊಂಕಣ ಭಾಗ(ಮುಂಬೈ, ಪಲ್ಗಾರ್, ಥಾಣೆ, ರಾಯ್ ಗಢ್ ಜಿಲ್ಲೆಗಳು) ಮತ್ತು ಉತ್ತರ ಮಧ್ಯ ಮಹಾರಾಷ್ಟ್ರಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂಬೈ ಪೊಲೀಸರಿಂದ ನಿಷೇಧಾಜ್ಞೆ ಜಾರಿ:ಚಂಡಮಾರುತದಿಂದ ಜನರ ಜೀವನ, ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಭೀತಿಯಿಂದ ಮುಂಬೈ ಪೊಲೀಸರು ಸೆಕ್ಷನ್ 144ರಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ನಿಸರ್ಗ ಚಂಡಮಾರುತ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆಯ ಸಂಚಾರ ಸಮಯದಲ್ಲಿ ಬದಲಾವಣೆಯಾಗಿದೆ. ಮುಂಬೈನಿಂದ ಹೊರಡುವ ಐದು ವಿಶೇಷ ರೈಲುಗಳ ವೇಳಾಪಟ್ಟಿ ಬದಲಾಗಿದೆ.ಮೂರು ವಿಶೇಷ ರೈಲುಗಳ ಸಂಚಾರ ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ (ಸಿಆರ್) ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್‌ಟಿಟಿ-ಗೋರಖ್‌ಪುರ್ ಸ್ಪೆಷಲ್ ರೈಲು ಬೆಳಿಗ್ಗೆ 11.10 ರ ಬದಲು ರಾತ್ರಿ 8 ಗಂಟೆಗೆ, ಎಲ್‌ಟಿಟಿ-ತಿರುವನಂತಪುರಂ ಸ್ಪೆಷಲ್ ಬೆಳಿಗ್ಗೆ 11.40 ರ ಬದಲು 6 ಗಂಟೆಗೆ ಮತ್ತು ಎಲ್‌ಟಿಟಿ-ದರ್ಭಂಗಾ ಸ್ಪೆಷಲ್ ರಾತ್ರಿ 12.15 ರ ಬದಲು ರಾತ್ರಿ 8.30 ಕ್ಕೆ ಹೊರಡಲಿದೆ. ಅದೇ ರೀತಿ ಎಲ್‌ಟಿಟಿ-ವಾರಣಾಸಿ ಸ್ಪೆಷಲ್ ರೈಲು ಮಧ್ಯಾಹ್ನ 12.40 ರ ಬದಲು ರಾತ್ರಿ 9 ಗಂಟೆಗೆ ನಿರ್ಗಮಿಸಲಿದ್ದು, ಸಿಎಸ್‌ಎಂಟಿ-ಭುವನೇಶ್ವರ ಸ್ಪೆಷಲ್ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ) ಯಿಂದ ಇಲ್ಲಿಗೆ 3.05 ಕ್ಕೆ ಬದಲಾಗಿ ರಾತ್ರಿ 8 ಗಂಟೆಗೆ ಹೊರಡಲಿದೆ.

ಪಾಟ್ನಾ-ಎಲ್‌ಟಿಟಿ ಸ್ಪೆಷಲ್ ಬೆಳಿಗ್ಗೆ 11.30 ಕ್ಕೆ ಬರಲಿದ್ದು, ಇಂದು ಮಧ್ಯಾಹ್ನ 2.15 ಕ್ಕೆ ಬರಲಿರುವ ವಾರಣಾಸಿ-ಸಿಎಸ್‌ಎಂಟಿ ಸ್ಪೆಷಲ್ ರೈಲಿನ ವೇಳಾಪಟ್ಟಿ ಬದಲಾಗಿದೆ. ಸಂಜೆ 4.40 ಕ್ಕೆ ಬರಲಿರುವ ತಿರುವನಂತಪುರಂ-ಎಲ್‌ಟಿಟಿ ಸ್ಪೆಷಲ್ ರೈಲನ್ನು ಪುಣೆಯ ಮೂಲಕ ತಿರುಗಿಸಿ ಇಲ್ಲಿನ ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್‌ಟಿಟಿ) ಗೆ ತಲುಪಲಿದೆ.

ಕೊಂಕಣ ರೈಲ್ವೆ, ನಿನ್ನೆ ಹೊರಟಿದ್ದ ಎರ್ನಾಕುಲಂ-ಹೆಚ್.ನಿಜಾಮುದ್ದೀನ್ ವಿಶೇಷ ಮತ್ತು ತಿರುವನಂತಪುರಂ ಸೆಂಟ್ರಲ್-ಎಲ್‌ಟಿಟಿ ವಿಶೇಷ ರೈಲುಗಳನ್ನು ಮಡ್ಗಾಂವ್ ಜಂಕ್ಷನ್-ಲೋಂಡಾ-ಮಿರಾಜ್‌ಪುನ್‌ಮನ್‌ಮಾಡ್ ಮಾರ್ಗದ ಮೂಲಕ ತಿರುಗಿಸಿದೆ.ನಿನ್ನೆ ಹೊರಟ ದೆಹಲಿ-ತಿರುವನಂತಪುರಂ ಸೆಂಟ್ರಲ್ ವಿಶೇಷ ರೈಲನ್ನು ಸೂರತ್ ವಾಸೈ ರಸ್ತೆ ಕಲ್ಯಾಣ್ ಮಿರಾಜ್ ಲೊಂಡಾ ಮಡ್ಗಾಂವ್ ಮಾರ್ಗದ ಮೂಲಕ ಸಂಚಾರ ಬದಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com