ಜೂನ್ ತಿಂಗಳಲ್ಲಿ ಕೊರೋನಾ ಸ್ಥಿತಿಗತಿ ನೋಡಿ ಸಿನೆಮಾ ಹಾಲ್ ಗಳ ತೆರೆಯುವಿಕೆ ಬಗ್ಗೆ ನಿರ್ಧಾರ: ಪ್ರಕಾಶ್ ಜಾವದೇಕರ್

ಕೋವಿಡ್-19 ಸ್ಥಿತಿಗತಿಯನ್ನು ಈ ತಿಂಗಳು ಪರಾಮರ್ಶಿಸಿ ಸಿನೆಮಾ ಹಾಲ್ ಗಳನ್ನು ಮರು ಆರಂಭಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವದೇಕರ್ ತಿಳಿಸಿದ್ದಾರೆ.
ಪ್ರಕಾಶ್ ಜಾವದೇಕರ್
ಪ್ರಕಾಶ್ ಜಾವದೇಕರ್

ನವದೆಹಲಿ: ಕೋವಿಡ್-19 ಸ್ಥಿತಿಗತಿಯನ್ನು ಈ ತಿಂಗಳು ಪರಾಮರ್ಶಿಸಿ ಸಿನೆಮಾ ಹಾಲ್ ಗಳನ್ನು ಮರು ಆರಂಭಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವದೇಕರ್ ತಿಳಿಸಿದ್ದಾರೆ.

ನಿನ್ನೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚಲನಚಿತ್ರ ನಿರ್ಮಾಪಕರ ಸಂಘ, ಸಿನೆಮಾ ಪ್ರದರ್ಶಕರು ಮತ್ತು ಚಿತ್ರೋದ್ಯಮದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಸಚಿವರು ಈ ಮಾತುಗಳನ್ನು ಹೇಳಿದ್ದಾರೆ.

ಕೊರೋನಾ ವೈರಸ್ ನಿಂದ ಲಾಕ್ ಡೌನ್ ಆದ ನಂತರ ದೇಶಾದ್ಯಂತ ಚಲನಚಿತ್ರೋದ್ಯಮ ವಲಯದಲ್ಲಿ ಉಂಟಾಗಿರುವ ನಷ್ಟ ಮತ್ತು ತೊಂದರೆ ಬಗ್ಗೆ ಈ ಪ್ರತಿನಿಧಿಗಳು ಈಗಾಗಲೇ ಸಚಿವರಿಗೆ ಮನವಿಗಳನ್ನು ಸಲ್ಲಿಸಿದ್ದರು.

ಸಿನೆಮಾ ಹಾಲ್ ಗಳನ್ನು ತೆರೆಯುವ ಬಗ್ಗೆ ಮಾಹಿತಿ ನೀಡಿದ ಸಚಿವರು ಈ ತಿಂಗಳು ಕೋವಿಡ್-19 ಸ್ಥಿತಿಗತಿಗಳನ್ನು ನೋಡಿಕೊಂಡು ನಿರ್ಧರಿಸಲಾಗುವುದು ಎಂದರು.

ಭಾರತದಾದ್ಯಂತ 9,500ಕ್ಕೂ ಹೆಚ್ಚು ಸಿನೆಮಾ ಹಾಲ್ ಗಳಿದ್ದು ಟಿಕೆಟ್ ಮಾರಾಟದಿಂದ ಪ್ರತಿದಿನ ಸುಮಾರು 30 ಕೋಟಿ ರೂಪಾಯಿ ಆದಾಯ ಬರುತ್ತದೆ.

ಚಲನಚಿತ್ರೋದ್ಯಮದಲ್ಲಿ ತೊಡಗಿಕೊಂಡಿರುವ ಅನೇಕ ಕಾರ್ಮಿಕರಿಗೆ ಆರ್ಥಿಕ ಸಂಕಷ್ಟ ಉಂಟಾಗಿದ್ದು ವೇತನದಲ್ಲಿ ಸಬ್ಸಿಡಿ, 3 ವರ್ಷಗಳವರೆಗೆ ಬಡ್ಡಿರಹಿತ ಸಾಲ, ತೆರಿಗೆ ಮತ್ತು ಸುಂಕ ವಿನಾಯ್ತಿ, ವಿದ್ಯುತ್ ಬಿಲ್ ಕಡಿತ ಹೀಗೆ ಹತ್ತಾರು ಬೇಡಿಕೆಗಳನ್ನು ಉದ್ಯಮದ ಪ್ರತಿನಿಧಿಗಳು ಸಚಿವರ ಮುಂದಿಟ್ಟಿದ್ದರು.

ನಿರ್ಮಾಣಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಆರಂಭಿಸುವುದರ ಬಗ್ಗೆ ಮಾತನಾಡಿದ ಸಚಿವ ಜಾವದೇಕರ್ ಸರ್ಕಾರದಿಂದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com