ಶ್ರಮಿಕ ವಿಶೇಷ ರೈಲು ರದ್ದು: ದೇಶದಲ್ಲೇ 3ನೇ ಸ್ಥಾನ ಪಡೆದ ಕರ್ನಾಟಕ

ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುವುದಕ್ಕೆ ಅನುಕೂಲ ಕಲ್ಪಿಸಲು ಓಡಿಸಲಾಗುತ್ತಿರುವ ಶ್ರಮಿಕ ವಿಶೇಷ ರೈಲುಗಳನ್ನು ರದ್ದುಗೊಳಿಸುವ ಟಾಪ್ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಕೂಡ ಸ್ಥಾನವನ್ನು ಪಡೆದುಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುವುದಕ್ಕೆ ಅನುಕೂಲ ಕಲ್ಪಿಸಲು ಓಡಿಸಲಾಗುತ್ತಿರುವ ಶ್ರಮಿಕ ವಿಶೇಷ ರೈಲುಗಳನ್ನು ರದ್ದುಗೊಳಿಸುವ ಟಾಪ್ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಕೂಡ ಸ್ಥಾನವನ್ನು ಪಡೆದುಕೊಂಡಿದೆ. 

ಈ ವಿಶೇಷ ರೈಲುಗಳನ್ನು ರದ್ದು ಮಾಡಿರುವ ರಾಜ್ಯಗಳಲ್ಲಿ ಕರ್ನಾಟಕ 3ನೇ ಸ್ಥಾನ ಪಡೆದೆಗುಕೊಂಡಿದೆ. ಮೇ.1ರಿಂದ ಭಾನುವಾರದವರೆಗೆ ರೈಲ್ವೇ ಇಲಾಖೆ ಒಟ್ಟಾರೆ 4,040 ಶ್ರಮಿಕ ವಿಶೇಷ ರೈಲುಗಳನ್ನು ಓಡಿಸಿದೆ. 

ಒಟ್ಟು 256 ರೈಲುಗಳನ್ನು ಈ ವರೆಗೆ ರಾಜ್ಯ ಸರ್ಕಾರಗಳೇ ರದ್ದುಗೊಳಿಸಿವೆ. ಮಹಾರಾಷ್ಟ್ರ ಅತ್ಯಧಿಕ 105 ರೈಲು, ಗುಜರಾತ್ 47, ಕರ್ನಾಟಕ 38 ಹಾಗೂ ಉತ್ತರಪ್ರದೇಶ ಸರ್ಕಾರ 30 ರೈಲುಗಳನ್ನು ರದ್ದುಗೊಳಿಸಿವೆ. 

ಸೂಕ್ತ ಶಿಷ್ಟಾಚಾರಗಳಿಲ್ಲದೆಯೇ ರೈಲುಗಳನ್ನು ಓಡಿಸಲು ಸಾಧ್ಯವಿಲ್ಲ. ಸಾಕಷ್ಟು ರಾಜ್ಯಗಳು ಪ್ರಯಾಣಿಕರ ಪಟ್ಟಿಯನ್ನೇ ಸೂಕ್ತ ರೀತಿಯಲ್ಲಿ ನೀಡಿರಲಿಲ್ಲ. ಹೀಗಾಗಿ ರೈಲುಗಳ ಸಂಚಾರ ರದ್ದುಕೊಂಡಿತ್ತು. ಎರಡು ರಾಜ್ಯಗಳ ಸೂಕ್ತ ಸಹಕಾರವಿಲ್ಲದೆಯೇ ರೈಲುಗಳ ಸಂಚಾರ ರದ್ದುಗೊಂಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com