ಜಮಾತ್  ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 960 ವಿದೇಶಿ ತಬ್ಲಿಘಿಗಳಿಗೆ 10 ವರ್ಷ ನಿಷೇಧ!

ತಬ್ಲಿಘಿ ಜಮಾತ್  ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ 960 ವಿದೇಶಿ ಪ್ರಜೆಗಳಿಗೆ ಭಾರತ ಪ್ರವೇಶಕ್ಕೆ 10 ವರ್ಷಗಳ ಕಾಲ ನಿಷೇಧ ಹೇರಿ ಕೇಂದ್ರ ಸರ್ಕಾರ ಆದೇಶಿಸಿದೆ.
ನಿಜಾಮುದ್ದೀನ್ ಮಾರ್ಕಾಜ್ ಮರ್ಕಜ್
ನಿಜಾಮುದ್ದೀನ್ ಮಾರ್ಕಾಜ್ ಮರ್ಕಜ್

ನವದೆಹಲಿ: ತಬ್ಲಿಘಿ ಜಮಾತ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ 960 ವಿದೇಶಿ ಪ್ರಜೆಗಳಿಗೆ ಭಾರತ ಪ್ರವೇಶಕ್ಕೆ 10 ವರ್ಷಗಳ ಕಾಲ ನಿಷೇಧ ಹೇರಿ ಕೇಂದ್ರ ಸರ್ಕಾರ ಆದೇಶಿಸಿದೆ.

ಈ ವಿದೇಶಿ ಪ್ರಜೆಗಳು ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೊರಡಿಸಲಾದ ವೀಸಾ ಷರತ್ತುಗಳನ್ನು ಉಲ್ಲಂಘಿಸಿ, ಮಿಷನರಿ ಚಟುವಟಿಕೆಗಳಲ್ಲಿ ಅಕ್ರಮವಾಗಿ ಬಾಗವಹಿಸಿದ್ದು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ಏಪ್ರಿಲ್ ನಲ್ಲಿ ನಿಜಾಮುದ್ದೀನ್ ಮರ್ಕಜ್ ಧಾರ್ನಿಕ ಸಭೆಯಲ್ಲಿ ಪಾಲ್ಗೊಂಡಿದ್ದ ನೂರಾರು ತಬ್ಲಿಘಿ ಜಮಾತ್  ಸದಸ್ಯರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿತ್ತು. ಆ ನಂತರ ಅವರ ದೇಶಾದ್ಯಂತದ ಸಂಚಾರದ ಪರಿಣಾಮ ದೇಶದ ನಾನಾ ಭಾಗಗಳಿಅಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿದ್ದವು.

ನಿಜಾಮುದ್ದೀನ್‌ನಲ್ಲಿನ ಧಾರ್ಮಿಕ ಸಭೆಯಲ್ಲಿ ವಿದೇಶಿ ಪ್ರಜೆಗಳು ಸೇರಿದಂತೆ ಕನಿಷ್ಠ 9,000 ಜನರು ಭಾಗವಹಿಸಿದ್ದರು. ಆ ನಂತರದ ದಿನಗಳಲ್ಲಿ ದೇಶದಲ್ಲಿ ಹಾಜರಿದ್ದ ಅನೇಕರು ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಿದರು.ಪೊಲೀಸರ ಪ್ರಕಾರ, ಈ ವಿದೇಶಿ ಪ್ರಜೆಗಳು ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಪ್ರವೇಶಿಸಿದ್ದರು ಮತ್ತು ಮರ್ಕಜ್ ನಲ್ಲಿ  ನಡೆದ ಕೂಟದಲ್ಲಿ ಅಕ್ರಮವಾಗಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com