ಹರಿಯಾಣ: ಜುಲೈನಿಂದ ಶಾಲೆಗಳು, ಆಗಸ್ಟ್ ನಲ್ಲಿ ಕಾಲೇಜ್ ಆರಂಭ

ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರ ಮಧ್ಯೆಯೇ ಜುಲೈನಿಂದ ಶಾಲೆಗಳು ಮತ್ತು ಆಗಸ್ಟ್ ನಲ್ಲಿ ಕಾಲೇಜ್ ಗಳನ್ನು ಆರಂಭಸಿಲು ಹರಿಯಾಣ ಸರ್ಕಾರ ನಿರ್ಧರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡೀಗಢ: ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರ ಮಧ್ಯೆಯೇ ಜುಲೈನಿಂದ ಶಾಲೆಗಳು ಮತ್ತು ಆಗಸ್ಟ್ ನಲ್ಲಿ ಕಾಲೇಜ್ ಗಳನ್ನು ಆರಂಭಸಿಲು ಹರಿಯಾಣ ಸರ್ಕಾರ ನಿರ್ಧರಿಸಿದೆ.

ಕೇಂದ್ರ ಗೃಹ ಸಚಿವಾಲಯ ತನ್ನ ಲಾಕ್ ಡೌನ್ ಮಾರ್ಗಸೂಚಿಯಲ್ಲಿ ಜುಲೈನಲ್ಲಿ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲೆಗಳನ್ನು ಪುನಾರಂಭಿಸಲು ನಿರ್ಧರಿಸಿದೆ ಎಂದು ಹರಿಯಾಣ ಶಿಕ್ಷಣ ಸಚಿವ ಕನ್ವಾರ್ ಪಾಲ್ ಗುಜ್ಜರ್ ಅವರು ಹೇಳಿದ್ದಾರೆ.

ನಾವು ಹಂತಹಂತವಾಗಿ ಶಾಲೆಗಳನ್ನು ಆರಂಭಿಸುತ್ತೇವೆ. ಮೊದಲ ಹಂತದಲ್ಲಿ ಜುಲೈ 1ರಿಂದ 10, 11 ಮತ್ತು 12ನೇ ತರಗತಿಗಳಿಗೆ ಬೋಧನಾ ಕೆಲಸ ಆರಂಭವಾಗಲಿದೆ. ಎರಡನೇ ಹಂತದಲ್ಲಿ ಜುಲೈ 15ರಿಂದ  6, 7, 8 ಮತ್ತು 9 ತರಗತಿಗಳು ಆರಂಭವಾಗಲಿವೆ. ಆಗಸ್ಟ್ ನಲ್ಲಿ ಪ್ರಾಥಮಿಕ ಶಾಲೆ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.

ತರಗತಿಗಳು ಪಾಳಿಯಲ್ಲಿ ನಡೆಯಲಿದ್ದು, ಒಂದು ತರಗತಿಯ ಅರ್ಧದಷ್ಟು ವಿದ್ಯಾರ್ಥಿಗಳು ಮೊದಲ ಪಾಳಿಯಲ್ಲಿ ಹಾಜರಾಗುತ್ತಾರೆ ಮತ್ತು ಉಳಿದವರು ಎರಡನೆ ಪಾಳಿಯಲ್ಲಿ ಬರುತ್ತಾರೆ. ಶಿಫ್ಟ್ ಗಳ ಸಮಯವನ್ನು ನಾವು ಇನ್ನೂ ನಿರ್ಧರಿಸಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com