ದೇಶಾದ್ಯಂತ 24 ಗಂಟೆಗಳಲ್ಲಿ 9,851 ಹೊಸ ಕೊರೋನಾ ಪಾಸಿಟಿವ್ ಪ್ರಕರಣ, ಸೋಂಕಿತರ ಸಂಖ್ಯೆ 2.2 ಲಕ್ಷಕ್ಕೆ ಏರಿಕೆ

ಭಾರತದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು. ಕೇವಲ 24 ಗಂಟೆಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 9,851 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು. ಕೇವಲ 24 ಗಂಟೆಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 9,851 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 

ದೇಶದ ವಿವಿಧ ರಾಜ್ಯಗಳಲ್ಲಿ ಒಂದು ದಿನದ ಗರಿಷ್ಟ ಸೋಂಕಿತರ ಸಂಖ್ಯೆ ದಾಖಲಾಗಿದ್ದು, ನಿನ್ನೆ ಒಂದೇ ದಿನ ದೇಶಾದ್ಯಂತ 9,851 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 226,770ಕ್ಕೇರಿದೆ.

ಇನ್ನು ನಿನ್ನೆ ಒಂದೇ ದಿನ ದೇಶಾದ್ಯಂತ 273 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ದೇಶದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 6348ಕ್ಕೆ ಏರಿಕೆಯಾಗಿದೆ. 

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ  3,804 ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಒಟ್ಟಾರೆ ಸೋಂಕಿತರ ಪೈಕಿ ಗುಣಮುಖರಾದವರ ಸಂಖ್ಯೆ 1,09,462 ಕ್ಕೆ ಏರಿಕೆಯಾಗಿದೆ. 1,10,960  ಸಕ್ರಿಯ ಪ್ರಕರಣಗಳು ಅಥವಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.  ಇನ್ನು ದೇಶದಲ್ಲಿ ಗುಣಮುಖ ಸೋಂಕಿತರ ಪ್ರಮಾಣದಲ್ಲೂ ಏರಿಕೆ ಕಂಡುಬಂದಿದ್ದು ಗುಣಮುಖ ಪ್ರಮಾಣ ಶೇ.47.99ಕ್ಕೆ ಏರಿಕೆಯಾಗಿದೆ.

ದೇಶಾದ್ಯಂತ 43,86,376 ಕೊರೋನಾ ಪರೀಕ್ಷೆ
ಇನ್ನು ದೇಶಾದ್ಯಂತ ಈ ವರೆಗೂ 43,86,376 ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 1,43,661 ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಇನ್ನು ವಿಶ್ವದಲ್ಲಿ ಕೊರೋನಾ ವೈರಸ್ ಆರ್ಭಟಕ್ಕೆ ತುತ್ತಾಗಿ ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 7ನೇ ಸ್ಥಾನದಲ್ಲಿದ್ದು, ಅಮೆರಿಕ, ಬ್ರೆಜಿಲ್, ರಷ್ಯಾ, ಬ್ರಿಟನ್, ಸ್ಪೇನ್ ಮತ್ತು ಇಟಲಿ ನಂತರದಲ್ಲಿ ಭಾರತವಿದೆ. ಇನ್ನು ಕೊರೋನಾ ವೈರಸ್ ಗೆ ಅತೀ ಹೆಚ್ಚು ಸಾವು ಕಂಡ ದೇಶಗಳ ಪಟ್ಟಿಯಲ್ಲಿ ಭಾರತ 12ನೇ ಸ್ಥಾನದಲ್ಲಿದೆ. ಇನ್ನು ವೈರಸ್ ಸೋಂಕಿನಿಂದ ಗುಣಮುಖ ಪಟ್ಟಿಯಲ್ಲಿ ಭಾರತ 8 ಮತ್ತು ಅತೀ ಹೆಚ್ಚು ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ವಿವಿಧ ರಾಜ್ಯಗಳ ಕೊರೋನಾ ಸೋಂಕು ದತ್ತಾಂಶ ಪಟ್ಟಿ ಇಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com