ವಿಶ್ವ ಸೈಕಲ್ ದಿನದಂದೇ: ಘಾಜಿಯಾಬಾದ್'ನಲ್ಲಿನ ಅಟ್ಲಾಸ್ ಕಂಪನಿ ಬಂದ್!

ಭಾರತದ ಪ್ರಮುಖ ಬೈಸಿಕಲ್ ಉತ್ಪಾದನಾ ಕಂಪನಿ ಅಟ್ಲಾಸ್ ಸೈಕಲ್ ಆರ್ಥಿಕ ಹಿಂಜರಿತದಿಂದಾಗಿ ಉತ್ತರಪ್ರದೇಶದ ಘಾಜಿಯಾಬಾದ್'ನಲ್ಲಿರುವ ಕೈಗಾರಿಕೆಯನ್ನು ಮುಚ್ಚುವುದಾಗಿ ಘೋಷಣೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದ ಪ್ರಮುಖ ಬೈಸಿಕಲ್ ಉತ್ಪಾದನಾ ಕಂಪನಿ ಅಟ್ಲಾಸ್ ಸೈಕಲ್ ಆರ್ಥಿಕ ಹಿಂಜರಿತದಿಂದಾಗಿ ಉತ್ತರಪ್ರದೇಶದ ಘಾಜಿಯಾಬಾದ್'ನಲ್ಲಿರುವ ಕೈಗಾರಿಕೆಯನ್ನು ಮುಚ್ಚುವುದಾಗಿ ಘೋಷಣೆ ಮಾಡಿದೆ. 

ಇದರಿಂದಾಗಿ ಸುಮಾರು 1000 ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಕಾಕತಾಳೀಯ ಎಂಬಂತೆ ವಿಶ್ವ ಬೈಸಿಕಲ್ ದಿನವಾದ ಜೂನ್.3ರಂದೇ ಕಂಪನಿಯು ಈ ವಿಚಾರವನ್ನು ಪ್ರಕಟಿಸಿದೆ.

1951ರಲ್ಲಿ ಚಿಕ್ಕದಾಗಿ ಆರಂಭವಾದ ಹರಿಯಾಣದ ಈ ಕಂಪನಿ 1965ರಲ್ಲಿ ದೇಶದ ಅತೀದೊಡ್ಡ ಸೈಕಲ್ ಉತ್ಪಾದನಾ ಕಂಪನಿಯಾಗಿ ಬೆಳೆದಿತ್ತು. ವಿವಿಧ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.

ವರ್ಷಕ್ಕೆ 40 ಲಕ್ಷ ಸೈಕಲ್ ಉತ್ಪಾದಿಸುವ ಸಾಮರ್ಥ್ಯವನ್ನು ಗಳಿಸಿಕೊಂಡಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಂಪನಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಈ ಹಿನ್ನೆಲೆಯಲ್ಲಿ 2014ರಲ್ಲಿ ಮಧ್ಯಪ್ರದೇಶದ ಘಟಕ ಮುಚ್ಚಿತ್ತು. 2018ರಲ್ಲಿ ಸೋನಿಪತ್ ಕಾರ್ಖಾನೆಗೂ ಬೀಗ ಜಡಿದಿತ್ತು. ಈಗ ಘಾಜಿಯಾಬಾದ್'ನ ಘಟಕದ ಬಾಗಿಲನ್ನೂ ಎಳೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com