ದೆಹಲಿಯ 6 ಇಡಿ ಅಧಿಕಾರಿಗಳಿಗೆ ಕೊರೋನಾ ಪಾಸಿಟಿವ್: ಪ್ರಧಾನ ಕಚೇರಿ ಸೀಲ್'ಡೌನ್

ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ದೆಹಲಿಯ ಜಾರಿ ನಿರ್ದೇಶನಾಲಯದ 6 ಮಂದಿ ಅಧಿಕಾರಿಗಳಲ್ಲಿ ವೈರಸ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇದೀಗ ಜಾರಿ ನಿರ್ದೇಶನಾಲಯದ ಪ್ರಧಾನಕಚೇರಿಯನ್ನು ಸೀಲ್'ಡೌನ್ ಮಾಡಲಾಗಿದೆ ಎಂದು ಶುಕ್ರವಾರ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ದೆಹಲಿಯ ಜಾರಿ ನಿರ್ದೇಶನಾಲಯದ 6 ಮಂದಿ ಅಧಿಕಾರಿಗಳಲ್ಲಿ ವೈರಸ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇದೀಗ ಜಾರಿ ನಿರ್ದೇಶನಾಲಯದ ಪ್ರಧಾನಕಚೇರಿಯನ್ನು ಸೀಲ್'ಡೌನ್ ಮಾಡಲಾಗಿದೆ ಎಂದು ಶುಕ್ರವಾರ ತಿಳಿದುಬಂದಿದೆ. 

ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 10 ಮಂದಿ ಅಧಿಕಾರಿಗಳನ್ನು ಇದೀಗ ಕ್ವಾರಂಟೈನ್ ಮಾಡಲಾಗಿದ್ದು, ಕಚೇರಿಯನ್ನು ಸೀಲ್ಡೌನ್ ಮಾಡಿ, ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ, 

ಅತೀ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತ ಇಟಲಿಯನ್ನು ಹಿಂದಿಕ್ಕಿದ್ದು, 6ನೇ ಸ್ತಾನಕ್ಕೆ ಜಿಗಿದಿದೆ. 

ವಿಶ್ವಕ ಕೊರೋನಾ ವೈರಸ್ ಕುರಿತ ಅಂಕಿ-ಅಂಶಗಳನ್ನು ನಿರ್ವಹಿಸುವ ವರ್ಲ್ಡೋಮೀಟರ್ ವೆಬ್'ಸೈಟ್ ಈ ಕುರಿತು ಮಾಹಿತಿ ನೀಡಿದೆ. ಅದರ ಪ್ರಕಾರ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 2.34,163ಕ್ಕೇರಿದೆ. ಈ ಮೂಲಕ 2.34,013 ಸೋಂಕಿತರಿರುವ ಇಟಲಿಯನ್ನು ಭಾರತ ಹಿಂದಿಕ್ಕಿದೆ. ಆದರೆ, ಇಟಲಿಯಲ್ಲಿ ಈ ವರೆಗೆ 33,689 ಮಂದಿ ಸಾವಿಗೀಡಾಗಿದ್ದು, ಭಾರತದಲ್ಲಿ ಈ ಸಂಖ್ಯೆ 6588 ಎಂದು ವೆಬ್'ಸೈಟ್ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com