ದುಬೈ ನಿಂದ ಭಾರತಕ್ಕೆ ವಾಪಸ್ಸಾಗಲು 800 ಕಾಶ್ಮೀರಿಗಳಿಂದ ವಿಶೇಷ ವಿಮಾನ: ಸರ್ಕಾರದ ಅನುಮತಿಗೆ ಮನವಿ 

ದುಬೈ ನಲ್ಲಿ ಸಿಲುಕಿಕೊಂಡಿರುವ 800 ಭಾರತೀಯರು ತಾವೇ ಹಣ ಹೊಂದಿಸಿಕೊಂಡು ದೇಶಕ್ಕೆ ಮರಳಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ವಿಮಾನ ಲ್ಯಾಂಡ್ ಆಗುವುದಕ್ಕೆ ಸರ್ಕಾರದ ಅನುಮತಿ ಬೇಕಾಗಿದ್ದು, ತ್ವರಿತ ಅನುಮತಿಗಾಗಿ ಮನವಿ ಮಾಡಿದ್ದಾರೆ. 
ದುಬೈ ನಿಂದ ಭಾರತಕ್ಕೆ ವಾಪಸ್ಸಾಗಲು 800 ಕಾಶ್ಮೀರಿಗಳಿಂದ ವಿಶೇಷ ವಿಮಾನ: ಸರ್ಕಾರದ ಅನುಮತಿಗೆ ಮನವಿ
ದುಬೈ ನಿಂದ ಭಾರತಕ್ಕೆ ವಾಪಸ್ಸಾಗಲು 800 ಕಾಶ್ಮೀರಿಗಳಿಂದ ವಿಶೇಷ ವಿಮಾನ: ಸರ್ಕಾರದ ಅನುಮತಿಗೆ ಮನವಿ

ಶ್ರೀನಗರ: ದುಬೈ ನಲ್ಲಿ ಸಿಲುಕಿಕೊಂಡಿರುವ 800 ಭಾರತೀಯರು ತಾವೇ ಹಣ ಹೊಂದಿಸಿಕೊಂಡು ದೇಶಕ್ಕೆ ಮರಳಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ವಿಮಾನ ಲ್ಯಾಂಡ್ ಆಗುವುದಕ್ಕೆ ಸರ್ಕಾರದ ಅನುಮತಿ ಬೇಕಾಗಿದ್ದು, ತ್ವರಿತ ಅನುಮತಿಗಾಗಿ ಮನವಿ ಮಾಡಿದ್ದಾರೆ. 

ದುಬೈ ನಲ್ಲಿ ಸಿಲುಕಿಕೊಂಡಿರುವ ಕಾಶ್ಮೀರಿಗಳು ಉದ್ಯೋಗ ಕಡಿತ, ಗರ್ಭಿಣಿ ಮಹಿಳೆಯರು, ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆದಾಯವು ಇಲ್ಲದೆ ದಿಕ್ಕು ಕಾಣದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಭಾರತ ಸರ್ಕಾರ ತಮ್ಮನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. 

ಅಲ್ಲಿ ಸಿಲುಕಿಕೊಂಡಿರುವ ಕೆಲವು ಮಂದಿ ವಿಸಿಟ್ ವೀಸಾ ಅಷ್ಟೇ ಹೊಂದಿದ್ದು, ವೀಸಾ ಸಮಸ್ಯೆಗಳೂ ಎದುರಾಗುತ್ತಿದೆ. "ಸರ್ಕಾರದ ವಂದೇ ಭಾರತ್ ಮಿಷನ್ ನ ಅಡಿಯಲ್ಲಿ ದುಬೈ ಗೆ ಈ ವರೆಗೂ ಒಂದೇ ವಿಮಾನ ಬಂದಿದೆ. ಮೇ ತಿಂಗಳಲ್ಲಿ ಒಂದು ಬಂದಿದ್ದು ಮತ್ತೆ ಜೂನ್ 11 ಕ್ಕೆ ಮತ್ತೊಂದು ವಿಮಾನವನ್ನು ನಿಗದಿಪಡಿಸಲಾಗಿದ್ದು ಇದರಲ್ಲಿ 150 ಮಂದಿ ಬರಲಿದ್ದಾರೆ" ಎನ್ನುತ್ತಾರೆ ದುಬೈ ನಲ್ಲಿ ಸಿಲುಕಿಕೊಂಡಿರುವ ಸಜಾದ್ ಅಹ್ಮದ್  

ಕೊರೋನಾ ವೈರಸ್ ನಿಂದಾಗಿ ನನ್ನ ಕಂಪನಿ ವೀಸಾವನ್ನು ರದ್ದುಗೊಳಿಸಿದೆ, ವೇತನ ಇಲ್ಲದೆ 3  ತಿಂಗಳಾಗಿದೆ ಈಗ ನನ್ನ ಬಳಿ ಏನು ಉಳಿದಿಲ್ಲ ಎಂದು ಸಾಜದ್ ಅಹ್ಮದ್ ತಮ್ಮ ನೋವು ಹೇಳಿಕೊಂಡಿದ್ದಾರೆ. 

ದುಬೈ ನಲ್ಲಿ ಸಿಲುಕಿಕೊಂಡಿರುವ 800 ಕಾಶ್ಮೀರಿಗಳು ಒಟ್ಟು ಸೇರಿ ಎರಡು ಚಾರ್ಟೆಡ್ ವಿಮಾನಗಳನ್ನು ವ್ಯವಸ್ಥೆ ಮಾಡಿಕೊಂಡಿದ್ದು ಶ್ರೀನಗರಕ್ಕೆ ತಲುಪಲು ಕಾತುರದಿಂದ ಇದ್ದಾರೆ, ಆದರೆ ಅವರು ವ್ಯವಸ್ಥೆ ಮಾಡಿಕೊಂಡಿರುವ ವಿಮಾನ ಶ್ರೀನಗರದಲ್ಲಿ ಬಂದಿಳಿಯುವುದಕ್ಕೆ ಸರ್ಕಾರದ ಅನುಮತಿ ಬೇಕಿದ್ದು, ಶೀಘ್ರವೇ ಅನುಮತಿ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಮನವಿ ಮಾಡುತ್ತಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com