ಕೊರೋನಾ ಭೀತಿ: ದೈಹಿಕ ಸಂಪರ್ಕವಿಲ್ಲದ 'ವರ್ಚ್ಯುವಲ್ ಸೆಕ್ಸ್' ಹಾದಿ ಹಿಡಿದ ಲೈಂಗಿಕ ಕಾರ್ಯಕರ್ತೆಯರು!

ಮಾರಕ ಕೊರೋನಾ ವೈರಸ್ ವಿಶ್ವದ ಆರ್ಥಿಕತೆ ಮಾತ್ರವಲ್ಲದೇ ಜನ ಸಾಮಾನ್ಯರ ಬದುಕನ್ನು ದುರ್ಬಲಗೊಳಿಸಿದ್ದು, ಪ್ರಮುಖವಾಗಿ ಲೈಂಗಿಕ ಕಾರ್ಯಕರ್ತೆಯರ ಬದುಕನ್ನು ಅತಂತ್ರಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಚ್ಚಿ: ಮಾರಕ ಕೊರೋನಾ ವೈರಸ್ ವಿಶ್ವದ ಆರ್ಥಿಕತೆ ಮಾತ್ರವಲ್ಲದೇ ಜನ ಸಾಮಾನ್ಯರ ಬದುಕನ್ನು ದುರ್ಬಲಗೊಳಿಸಿದ್ದು, ಪ್ರಮುಖವಾಗಿ ಲೈಂಗಿಕ ಕಾರ್ಯಕರ್ತೆಯರ ಬದುಕನ್ನು ಅತಂತ್ರಗೊಳಿಸಿದೆ.

ಪ್ರಮುಖವಾಗಿ ದೇಹವನ್ನೇ ದುಡಿಮೆಯ ವಸ್ತುವನ್ನಾಗಿಸಿಕೊಂಡಿದ್ದ ಲೈಂಗಿಕ ಕಾರ್ಯಕರ್ತೆಯರ ಬದುಕನ್ನು ಕೊರೋನಾ ಅತಂತ್ರಸ್ಥಿತಿಗೆ ತಳ್ಳಿದ್ದು, ಕೊರೋನಾ ಭೀತಿಯಿಂದ ಗ್ರಾಹಕರಿಲ್ಲದೇ ಲೈಂಗಿಕ ಕಾರ್ಯಕರ್ತೆಯರು ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅಂತೆಯೇ ಗ್ರಾಹಕರ ಸೋಗಿನಲ್ಲಿ ಬರುವ ಮಂದಿಗೆ ಸೋಂಕು ಇರುವ ಭೀತಿ ಒಂದೆಡೆ... ಹೊಟ್ಟೆಪಾಡು ಮತ್ತು ಬದುಕು ಈ ಎರಡರ ನಿರ್ವಹಣೆಗೆ ಇದೀಗ ಲೈಂಗಿಕ ಕಾರ್ಯಕರ್ತೆಯರು ವಿನೂತನ ಹಾದಿ ಕಂಡುಕೊಂಡಿದ್ದಾರೆ. ಅದೇ ವರ್ಚ್ಯುವಲ್ ಸೆಕ್ಸ್..

ಇಷ್ಟಕ್ಕೂ ಏನಿದು ವರ್ಚ್ಯುವಲ್ ಸೆಕ್ಸ್?
ಗ್ರಾಹಕನ ದೈಹಿಕ ಸಂಪರ್ಕವಿಲ್ಲದೇ ಆತನ ಲೈಂಗಿಕ ವಾಂಛೆಗಳನ್ನೂ ವರ್ಚ್ಯುವಲ್ ಸೆಕ್ಸ್ ಮೂಲಕ ತೀರಿಸಬಹುದು. ಈ ಕುರಿತಂತೆ ಕೇರಳದ 32 ವರ್ಷದ ಲೈಂಗಿಕ ಕಾರ್ಯಕರ್ತೆಯೊಬ್ಬರು ಈ ರೀತಿಯ ವಿನೂತನ ಪ್ರಯೋಗಕ್ಕೆ ಕೈಹಾಕಿದ್ದಾರೆ.

ಗ್ರಾಹಕರಿಂದ ಇ-ಪೇಮೆಂಟ್ ಮೂಲಕ ಹಣ ಪಡೆದು, ವಿಡಿಯೋ ಕಾಲಿಂಗ್ ಮೂಲಕ ಗ್ರಾಹಕರ ಲೈಂಗಿಕ ಬಯಕೆಗಳನ್ನು ತೃಪ್ತಿ ಪಡಿಸುವ ವಿನೂತನ ಹಾದಿ ಕಂಡುಕೊಂಡಿದ್ದಾರೆ. ಆ ಮೂಲಕ ತಮ್ಮ ಜೀವನದೊಂದಿಗೆ ಜೀವವನ್ನೂ ರಕ್ಷಿಸಿಕೊಂಡು ವೃತ್ತಿ ಜೀವನ ಮುನ್ನಡೆಸಿದ್ದಾರೆ.

ಆಕೆ ಹೇಳಿರುವಂತೆ ಹಲವಾರು ಲೈಂಗಿಕ ಕಾರ್ಯಕರ್ತೆಯರು ಈಗಾಗಲೇ ಈ ವಿನೂತನ ಮಾರ್ಗ ಆರಂಭಿಸಿದ್ದು, ಇದು ಸುಲಭ ಮತ್ತು ಸುರಕ್ಷಿತ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಲೈಂಗಿಕ ಕಾರ್ಯಕರ್ತೆಯೊಬ್ಬರು, ವಿಡಿಯೋ ಕಾಲಿಂಗ್ ಆ್ಯಪ್ ಮೂಲಕ ಗ್ರಾಹಕರ ಬಯಕೆ ತೀರಿಸಲಾಗುತ್ತದೆ. ಅವರಿಂದ 100 ಅಥವಾ 200 ರೂಗಳನ್ನು ಪಡೆದು ವಿಡಿಯೋ ಕಾಲ್ ಮಾಡಲಾಗುತ್ತದೆ. ಆ ಮೂಲಕ ಅವರ ಲೈಂಗಿಕ ಭಾವನೆ ಈಡೇರಿಸಲಾಗುತ್ತದೆ. ಇದರಿಂದ ಗ್ರಾಹಕರು ಮಾತ್ರವಲ್ಲದೇ ನಾವೂ ಕೂಡ ಸುರಕ್ಷಿತವಾಗಿರಬಹುದು. ಅಲ್ಲದೆ 100 ಅಥವಾ 200 ರೂಗಳಂತಹ ಸಣ್ಣ ಮೊತ್ತದ ಹಣ ಪಡೆಯುವುದರಿಂದ ಗ್ರಾಹಕರ ಮೇಲೆ ಹೆಚ್ಚು ಆರ್ಥಿಕ ಒತ್ತಡ ಬೀಳುವುದಿಲ್ಲ. ಅಲ್ಲದೆ ತಮಗೂ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯಬಹುದು ಎಂದು ಹೇಳಿದ್ದಾರೆ.  

ಈ ಬಗ್ಗೆ ಮಾತನಾಡಿರುವ ಕೇರಳ ರಾಜ್ಯ ಏಡ್ಸ್ ಕಂಟ್ರೋಲ್ ಸೊಸೈಟಿ (ಕೆಎಸ್‌ಎಸಿಎಸ್) ಯೋಜನಾ ನಿರ್ದೇಶಕ ಡಾ.ರಮೇಶ್ ಆರ್ ಅವರು, ಈಗಾಗಲೇ ಕೊರೋನಾ ಕುರಿತಂತೆ ರಾಜ್ಯದ ಲೈಂಗಿಕ ಕಾರ್ಯಕರ್ತೆಯರಿಗೆ ಜಾಗೃತಿ ನೀಡಲಾಗಿದೆ. ಲೈಂಗಿಕ ಕಾರ್ಯಕರ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ವೃತ್ತಿ ಜೀವನ ನಡೆಸುವುದು ಅಸಾಧ್ಯದ ಮಾತೇ ಸರಿ. ಆದರೆ ದಾರಿ ಇಲ್ಲದ ಕಾರಣ ವರ್ಚುವಲ್ ಸೆಕ್ಸ್ ಅವರಿಗೆ ವರದಾನವಾಗಿದ್ದು, ಅಪಾಯವಿಲ್ಲದೇ ದುಡಿಮೆ ಮುಂದುವರೆಸಲು ಇದು ಸೂಕ್ತ ಹಾದಿ ಎಂದು ಹೇಳಿದ್ದಾರೆ.  

ವರದಿಯೊಂದರ ಅನ್ವಯ ಕೇರಳದಲ್ಲಿ 15,802  ಮಹಿಳೆ ಮತ್ತು 11,707 ಪುರುಷ ಲೈಂಗಿಕ ಕಾರ್ಯಕರ್ತರಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com