ಭಾರತ-ಚೀನಾ ರಾಜತಾಂತ್ರಿಕ, ಮಿಲಿಟರಿ ಮಾರ್ಗಗಳ ಮೂಲಕ ಮಾತುಕತೆಯಲ್ಲಿ ತೊಡಗಿವೆ: ಭಾರತೀಯ ಸೇನೆ

ಭಾರತ ಮತ್ತು ಚೀನಾದ ಗಡಿ ಭಾಗಗಳಲ್ಲಿ ಸದ್ಯ ನಡೆಯುತ್ತಿರುವ ಪರಿಸ್ಥಿತಿಗಳನ್ನು ಎದುರಿಸಲು ಭಾರತ ಮತ್ತು ಚೀನಾದ ಅಧಿಕಾರಿಗಳು ಸ್ಥಾಪಿತ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ತೊಡಗಿಸಿಕೊಂಡಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.
ಪೂರ್ವ ಲಡಾಕ್ ನ ಜೊಜಿಲಾ ಪಾಸ್ ಬಳಿ ಸೈನಿಕರ ನಿಯೋಜನೆ
ಪೂರ್ವ ಲಡಾಕ್ ನ ಜೊಜಿಲಾ ಪಾಸ್ ಬಳಿ ಸೈನಿಕರ ನಿಯೋಜನೆ

ನವದೆಹಲಿ: ಭಾರತ ಮತ್ತು ಚೀನಾದ ಗಡಿ ಭಾಗಗಳಲ್ಲಿ ಸದ್ಯ ನಡೆಯುತ್ತಿರುವ ಪರಿಸ್ಥಿತಿಗಳನ್ನು ಎದುರಿಸಲು ಭಾರತ ಮತ್ತು ಚೀನಾದ ಅಧಿಕಾರಿಗಳು ಸ್ಥಾಪಿತ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ತೊಡಗಿಸಿಕೊಂಡಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.

ಪೂರ್ವ ಲಡಾಕ್ ನಲ್ಲಿ ಸದ್ಯ ಉಂಟಾಗಿರುವ ಸೇನೆ ನಿಯೋಜನೆ ಪರಿಸ್ಥಿತಿಯನ್ನು ಬಗೆಹರಿಸಲು ಎರಡೂ ದೇಶಗಳ ಉನ್ನತ ಮಿಲಿಟರಿ ಮಟ್ಟದ ಮಾತುಕತೆ ಇಂದು ನಡೆಯುತ್ತಿದ್ದು ಈ ಮಧ್ಯೆ ಭಾರತೀಯ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ.

ನಿನ್ನೆಯ ಮಾತುಕತೆಯಲ್ಲಿ ಏನು ನಡೆಯಿತು?: ನಿನ್ನೆ ರಾಜತಾಂತ್ರಿಕ ಮಟ್ಟದ ಮಾತುಕತೆ ನಡೆಸಿದ ಎರಡೂ ದೇಶಗಳು ಭಿನ್ನಾಭಿಪ್ರಾಯಗಳನ್ನು ಶಾಂತಿಯುತ ಮಾತುಕತೆಗಳ ಮೂಲಕ ದೇಶಗಳ ಸೂಕ್ಷ್ಮ ಸಂಗತಿಗಳು ಮತ್ತು ಪರಿಸ್ಥಿತಿಗಳನ್ನು ಗೌರವಿಸಿ ಬಗೆಹರಿಸಿಕೊಳ್ಳಲು ಒಪ್ಪಿಕೊಂಡಿವೆ.

ಎರಡೂ ದೇಶಗಳ ನಾಯಕರು ನೀಡಿರುವ ಮಾರ್ಗದರ್ಶನದ ಪ್ರಕಾರ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ. 2018ರಲ್ಲಿ ವುಹಾನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅನೌಪಚಾರಿಕ ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ನಿನ್ನೆಯ ಸಭೆಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಹಂತದಲ್ಲಿ ಭಾರತ ಮತ್ತು ಚೀನಾ ದೇಶಗಳ ಮಿಲಿಟರಿ, ರಾಜತಾಂತ್ರಿಕ ಮಾತುಕತೆಗಳ ಬಗ್ಗೆ ಊಹಾತ್ಮಕ ಸುದ್ದಿ ಹಬ್ಬಿಸುವುದು, ಆಧಾರರಹಿತ ವರದಿ ಮಾಡುವುದು ಬೇಡ ಎಂದು ಭಾರತೀಯ ಸೇನೆ ಮಾಧ್ಯಮಗಳನ್ನು ಮನವಿ ಮಾಡಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com