ಪಶ್ಚಿಮ ಬಂಗಾಳ: ಲಾಕ್ ಡೌನ್ ವೇಳೆ ಕೆಲಸವಿಲ್ಲದೆ ಎರಡೂವರೆ ತಿಂಗಳ ಮಗುವನ್ನು 3 ಸಾವಿರ ರೂ. ಗೆ ಮಾರಿದ ದಂಪತಿ

ಕೊರೋನಾ ಲಾಕ್ ಡೌನ್ ನಿಂದ ಮೂರು ತಿಂಗಳ ಹಿಂದೆ ಉದ್ಯೋಗ ಕಳೆದುಕೊಂಡು ಜೀವನೋಪಾಯಕ್ಕೆ ದಿಕ್ಕು ತೋಚದೆ ಪಶ್ಚಿಮ ಬಂಗಾಳದ ಮಿಡ್ನಾಪುರ್ ಜಿಲ್ಲೆಯಲ್ಲಿ ದಿನಗೂಲಿ ದಂಪತಿ ಎರಡೂವರೆ ತಿಂಗಳ ಮಗುವನ್ನು 3 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತ್ತಾ: ಕೊರೋನಾ ಲಾಕ್ ಡೌನ್ ನಿಂದ ಮೂರು ತಿಂಗಳ ಹಿಂದೆ ಉದ್ಯೋಗ ಕಳೆದುಕೊಂಡು ಜೀವನೋಪಾಯಕ್ಕೆ ದಿಕ್ಕು ತೋಚದೆ ಪಶ್ಚಿಮ ಬಂಗಾಳದ ಮಿಡ್ನಾಪುರ್ ಜಿಲ್ಲೆಯಲ್ಲಿ ದಿನಗೂಲಿ ದಂಪತಿ ಎರಡೂವರೆ ತಿಂಗಳ ಮಗುವನ್ನು 3 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಹೌರಾದ ಮನೆಯೊಂದರಲ್ಲಿ ಮಗು ಮಕ್ಕಳ ಸಹಾಯದ ಸರ್ಕಾರೇತರ ಸಂಘಟನೆ ಅಧಿಕಾರಿಗಳ ಗಮನಕ್ಕೆ ಬಂದು ಅವರು ಪೊಲೀಸರಿಗೆ ತಿಳಿಸಿ ಪೊಲೀಸರು ಬಂದು ತನಿಖೆ ಮಾಡಿದಾಗಲೇ ಘಟನೆ ಬೆಳಕಿಗೆ ಬಂದದ್ದು. ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು ಪೋಷಕರು ಸಿಕ್ಕಿಲ್ಲ.

ಮಗುವಿನ ನಿಜವಾದ ಪೋಷಕರ ದೂರದ ಸಂಬಂಧಿಕರಿಗೇ ಮಾರಾಟ ಮಾಡಲಾಗಿತ್ತು ಎಂದು ಘಟಾಲ್ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅಗ್ನೀಶ್ವರ್ ಚೌಧರಿ ತಿಳಿಸಿದ್ದಾರೆ. ತನಿಖೆ ಮಾಡಿದಾಗ ಮಗುವನ್ನು 3 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಬಪನ್ ಧಾರಾ ಮತ್ತು ಆತನ ಪತ್ನಿ ತಾಪಸಿ ಘಟಾಲಾದ ನಿವಾಸಿಗಳಾಗಿದ್ದು ಲಾಕ್ ಡೌನ್ ನಂತರ ಕೆಲಸ ಕಳೆದುಕೊಂಡಿದ್ದರು. ಪತಿ ದಿನಗೂಲಿ ನೌಕರನಾದರೆ ಪತ್ನಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮನೆಯಲ್ಲಿ ದಿನಸಿಗೆ ಸಾಕಷ್ಟು ಕಷ್ಟಪಡುತ್ತಿದ್ದರು. ಈ ಸಂದರ್ಭದಲ್ಲಿ ಬಪನ್ ನ ದೂರದ ಸಂಬಂಧಿಕರು ಮಕ್ಕಳಿಲ್ಲದವರಿಗೆ ಮಾರಾಟ ಮಾಡಿದ್ದಾರೆ. ಅಕ್ಕಪಕ್ಕದ ಮನೆಯವರಿಗೆ ಮಗುವಿನ ಅಳು ಶಬ್ದ ಕೇಳದೆ ಮನೆಗೆ ಬಂದು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಘಟಾಲ್ ಶಾಸಕ ಶಂಕರ್ ದಲೈ ಪ್ರತಿಕ್ರಿಯಿಸಿ, ಜೀವನದಲ್ಲಿ ಕಷ್ಟವಿದೆ ಎಂದು ಮಗುವನ್ನು ಮಾರಾಟ ಮಾಡಿದ್ದಾರೆ ಎಂದೆನಿಸುವುದಿಲ್ಲ. ಸರ್ಕಾರ ಬಡವರಿಗೆ ಹಲವು ಯೋಜನೆಗಳನ್ನು ತಂದಿದೆ. ಉಚಿತವಾಗಿ ಅಕ್ಕಿ ನೀಡಲಾಗಿದೆ. ಇತರ ಯೋಜನೆಗಳು ಸಹ ಇವೆ. ಆದರೂ ಕೂಡ ತಮ್ಮ ಮಗುವನ್ನು ಮಾರಾಟ ಮಾಡಿದ್ದಾರೆ ಎಂದರೆ ಊಹಿಸಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com