ಗೋಲ್ಡನ್ ಟೆಂಪಲ್‌ನಲ್ಲಿ ಆಪರೇಷನ್ ಬ್ಲೂ ಸ್ಟಾರ್ ವಾರ್ಷಿಕೋತ್ಸವ ವೇಳೆ ಖಲಿಸ್ತಾನ್ ಪರ ಘೋಷಣೆ

ಆಪರೇಷನ್ ಬ್ಲೂ ಸ್ಟಾರ್‌ನ 36ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಪಂಜಾಬಿನ ಅಮೃತಸರದ ಗೋಲ್ಡನ್ ಟೆಂಪಲ್ ಸಂಕೀರ್ಣದಲ್ಲಿ ಆಯೋಜಿಸಿದ್ದ ಜಾಥಾದಲ್ಲಿ ಕೆಲ ಸಿಖ್ ಮೂಲಭೂತವಾದಿಗಳು ಖಲಿಸ್ತಾನ್ ಪರ ಘೋಷಣೆ ಕೂಗಿದರು.
ಗೋಲ್ಡನ್ ಟೆಂಪಲ್
ಗೋಲ್ಡನ್ ಟೆಂಪಲ್

ಅಮೃತಸರ: ಆಪರೇಷನ್ ಬ್ಲೂ ಸ್ಟಾರ್‌ನ 36ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಪಂಜಾಬಿನ ಅಮೃತಸರದ ಗೋಲ್ಡನ್ ಟೆಂಪಲ್ ಸಂಕೀರ್ಣದಲ್ಲಿ ಆಯೋಜಿಸಿದ್ದ ಜಾಥಾದಲ್ಲಿ ಕೆಲ ಸಿಖ್ ಮೂಲಭೂತವಾದಿಗಳು ಖಲಿಸ್ತಾನ್ ಪರ ಘೋಷಣೆ ಕೂಗಿದರು.

ಶಿರೋಮಣಿ ಅಕಾಲಿ ದಳದ(ಅಮೃತಸರ) ಅಧ್ಯಕ್ಷ ಮತ್ತು ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ಅವರ ಪುತ್ರ ಇಮಾನ್ ಸಿಂಗ್ ಮಾನ್ ಅವರ ನೇತೃತ್ವದಲ್ಲಿ ಸುಮಾರು 100ಕ್ಕೂ ಹೆಚ್ಚು ಕಾರ್ಯಕರ್ತರು ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಿದರು.

ಇದೇ ವೇಳೆ ಸಿಖ್ ಮೂಲಭೂತವಾದಿ ಸಂಘಟನೆ ದಮ್ಡಾಮಿ ತಕ್ಸಲ್ ಮತ್ತು ಅಕಾಲ್ ತಖ್ತ್ ಜತೇದಾರ್ ಗಿಯಾನಿ ಹರ್ಪ್ರೀತ್ ಸಿಂಗ್ ಮತ್ತು ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ ಸದಸ್ಯರು, 1984ರಲ್ಲಿ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಹೊರಹಾಕಲು ನಡೆಸಿದ ಆಪರೇಷನ್ ಬ್ಲೂ ಸ್ಟಾರ್ ವೇಳೆ ಹತ್ಯೆಯಾದವರಿಗೆ ಗೌರವ ಸಲ್ಲಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com