ಅಮೂಲ್ ಖಾತೆ ನಿರ್ಬಂಧಕ್ಕೆ ಕಾರಣ ತಿಳಿಸಿದ ಟ್ವಿಟರ್ 

ಚೀನಾವನ್ನು ಗುರಿಯಾಗಿರಿಸಿಕೊಂಡು ಜಾಹಿರಾತನ್ನು ಟ್ವೀಟ್ ಮಾಡಿದ್ದ ಅಮೂಲ್ ಸಂಸ್ಥೆಯ ಖಾತೆಯನ್ನು ಟ್ವಿಟರ್ ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು. ಈ ಬಗ್ಗೆ ಈಗ ಸಾಮಾಜಿಕ ಜಾಲತಾಣ ಸಂಸ್ಥೆ ಸ್ಪಷ್ಟನೆ ನೀಡಿದೆ. 
ಟ್ವಿಟರ್
ಟ್ವಿಟರ್

ನವದೆಹಲಿ: ಚೀನಾವನ್ನು ಗುರಿಯಾಗಿರಿಸಿಕೊಂಡು ಜಾಹಿರಾತನ್ನು ಟ್ವೀಟ್ ಮಾಡಿದ್ದ ಅಮೂಲ್ ಸಂಸ್ಥೆಯ ಖಾತೆಯನ್ನು ಟ್ವಿಟರ್ ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು. ಈ ಬಗ್ಗೆ ಈಗ ಸಾಮಾಜಿಕ ಜಾಲತಾಣ ಸಂಸ್ಥೆ ಸ್ಪಷ್ಟನೆ ನೀಡಿದೆ. 

ಅಮೂಲ್ ಖಾತೆ ನಿರ್ಬಂಧಿಸಿದ್ದಕ್ಕೆ ಟ್ವಿಟರ್ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಟ್ವಿಟರ್ ಈ ಬಗ್ಗೆ ಎಚ್ಚೆತ್ತುಕೊಂಡು ಸ್ಪಷ್ಟನೆ ನೀಡಿದ್ದು, ಈ ಘಟನೆಗೂ ಅಮೂಲ್ ಟ್ವೀಟ್ ಮಾಡಿದ್ದರಲ್ಲಿ ಇದ್ದ ಕಂಟೆಂಟ್ ಗೂ ಸಂಬಂಧವಿಲ್ಲ ಎಂದು ಹೇಳಿದ್ದು ತಾಂತ್ರಿಕ ಅಡಚಣೆಯಿಂದಾಗಿ ಅಮೂಲ್ ನ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು ಎಂದು ಹೇಳಿದೆ. 

ಬಳಕೆದಾರರ ಖಾತೆ ಹಾಗೂ ಭದ್ರತೆ ನಮ್ಮ ಆದ್ಯತೆ ಆದರೆ ಕೆಲವೊಮ್ಮೆ ಖಾತೆಯ ಮಾಲಿಕರು ಸರಳವಾದ ರಿ-ಕ್ಯಾಪ್ಚಾವನ್ನು ಪೂರ್ಣಗೊಳಿಸಬೇಕಾಗುತ್ತದೆ, ಈ ರೀತಿ ಮಾಡಿದ ಬಳಿಕ ಟ್ವಿಟರ್ ಖಾತೆ ಪುನಃ ಸಕ್ರಿಯಗೊಳ್ಳುತ್ತದೆ ಎಂದು ಟ್ವಿಟರ್ ವಕ್ತಾರರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com