ಆತಂಕ ದೂರ: ಮಾತುಕತೆ ಮೂಲಕ ಗಡಿ ಸಮಸ್ಯೆ ಇತ್ಯರ್ಥಕ್ಕೆ ಭಾರತ-ಚೀನಾ ಸಮ್ಮತಿ

ಭಾರತ-ಚೀನಾ ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ, ಪರಸ್ಪರ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುವ ಮಹತ್ವದ ನಿರ್ಧಾರಕ್ಕೆ ಎರಡು ದೇಶಗಳು ಸಮ್ಮತಿಸಿವೆ.
ಭಾರತ-ಚೀನಾ
ಭಾರತ-ಚೀನಾ

ನವದೆಹಲಿ: ಭಾರತ-ಚೀನಾ ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ, ಪರಸ್ಪರ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುವ ಮಹತ್ವದ ನಿರ್ಧಾರಕ್ಕೆ ಎರಡು ದೇಶಗಳು ಸಮ್ಮತಿಸಿವೆ.

ಲಡಾಕ್ ಗೆ ಸಂಬಂಧಿಸಿದಂತೆ ಭಾರತ-ಚೀನಾ ಗಡಿ ಸಮಸ್ಯೆ ಎರಡು ದೇಶಗಳ ನಡುವೆ ನಡೆದ  ಉನ್ನತ ಸೇನಾ ಕಮಾಂಡರ್ ಸಭೆಯಲ್ಲಿ ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

ಗಡಿ ಸಮಸ್ಯೆಯನ್ನು ಶಾಂತಿ ಮಾತುಕತೆಗಳ ಮೂಲಕವೇ ಬಗೆಹರಿಸಲು ಉಭಯ ದೇಶಗಳ ಸೇನಾಧಿಕಾರಿಗಳೂ ಸಮ್ಮತಿ  ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ, ಮಾಲ್ಡೋದಲ್ಲಿ ನಡೆದ ಉನ್ನತ ಸೇನಾ ಕಮಾಂಡರ್ ಗಳ ಸಭೆ ಯಶಸ್ವಿಯಾಗಿದೆ ಎಂದೂ ಸ್ಪಷ್ಟಪಡಿಸಿದೆ.

ಗಡಿ ಸಮಸ್ಯೆ ಇತ್ಯರ್ಥಕ್ಕೆ ಶಾಂತಿ ಮಾತುಕತೆ ಮುಂದುವರೆಸುವ ಕುರಿತು ಹಾಗೂ ಗಡಿಯಲ್ಲಿನ ಉದ್ವಿಗ್ನತೆ ಕಡಿಮೆ ಮಾಡುವ ಕುರಿತು ಎರಡೂ ಕಡೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com