ಭಾರತ-ಚೀನಾ ಗಡಿ ವಿವಾದ:ಯಥಾಸ್ಥಿತಿ ಕಾಯ್ದುಕೊಳ್ಳಲು ಭಾರತ ಬದ್ಧ, ಸೇನಾಪಡೆ ಹಿಂಪಡೆಯಲು ಚೀನಾಕ್ಕೆ ಒತ್ತಡ

ಭಾರತ-ಚೀನಾ ಗಡಿಯ ವಾಸ್ತವ ನಿಯಂತ್ರಣ ರೇಖೆ(ಎಲ್ಎಸಿ)ಯುದ್ಧಕ್ಕೂ ಭಾರತದ ಪ್ರಾಂತ್ಯದಿಂದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ(ಪಿಎಲ್ಎ) ಪಡೆಯನ್ನು ಚೀನಾ ಹಿಂತೆಗೆದುಕೊಳ್ಳಬೇಕೆಂಬ ನಿಲುವಿಗೆ ಭಾರತ ಬದ್ಧವಾಗಿದ್ದು ಅದರಿಂದ ಹಿಂದೆ ಸರಿಯುವಂತೆ ಕಂಡುಬರುತ್ತಿಲ್ಲ.
ಭಾರತ-ಚೀನಾ ಗಡಿಭಾಗದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದಿರುವ ಬಾಲಕ
ಭಾರತ-ಚೀನಾ ಗಡಿಭಾಗದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದಿರುವ ಬಾಲಕ

ನವದೆಹಲಿ: ಭಾರತ-ಚೀನಾ ಗಡಿಯ ವಾಸ್ತವ ನಿಯಂತ್ರಣ ರೇಖೆ(ಎಲ್ಎಸಿ)ಯುದ್ಧಕ್ಕೂ ಭಾರತದ ಪ್ರಾಂತ್ಯದಿಂದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ(ಪಿಎಲ್ಎ) ಪಡೆಯನ್ನು ಚೀನಾ ಹಿಂತೆಗೆದುಕೊಳ್ಳಬೇಕೆಂಬ ನಿಲುವಿಗೆ ಭಾರತ ಬದ್ಧವಾಗಿದ್ದು ಅದರಿಂದ ಹಿಂದೆ ಸರಿಯುವಂತೆ ಕಂಡುಬರುತ್ತಿಲ್ಲ.

ನಿನ್ನೆ ಎರಡೂ ದೇಶಗಳ ಮಿಲಿಟರಿ ಕಮಾಂಡರ್ ಗಳ ಮಟ್ಟದ ಮಾತುಕತೆ ನಡೆದಿತ್ತು. ನಿನ್ನೆ ಬೆಳಗ್ಗೆ 11.30ರ ಸುಮಾರಿಗೆ ಆರಂಭವಾದ ಸಭೆ ಮಧ್ಯಾಹ್ನ ಊಟದ ವಿರಾಮ ಬಿಟ್ಟು ಸುಮಾರು 5 ಗಂಟೆಗಳ ಕಾಲ ಸಾಗಿತು. ಚೀನಾದ ಭಾಗದ ನಿಯಂತ್ರಣ ವಾಸ್ತವ ರೇಖೆಯ ಬಳಿ ಮೊಲ್ಡೊ ಗಡಿ ಭದ್ರತಾ ಸಭೆ ಕೇಂದ್ರದಲ್ಲಿ ಬೆಳಗ್ಗೆ 11.30ಕ್ಕೆ ಆರಂಭವಾದ ಸಭೆ ಸಾಯಂಕಾಲ 5.30ರ ಹೊತ್ತಿಗೆ ಮುಗಿಯಿತು ಎಂದು ಮೂಲಗಳಿಂದ ತಿಳಿದುಬಂದಿದೆ. ಲಡಾಕ್ ವಲಯದಲ್ಲಿ ಭಾರತ ರಸ್ತೆ ಮತ್ತು ಸೇತುವೆ ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸಬೇಕೆಂಬ ತನ್ನ ಬೇಡಿಕೆಯನ್ನು ಪಟ್ಟುಹಡಿದು ಚೀನಾ ಮುಂದುವರಿಸಿದೆ ಎಂದು ಹೇಳಲಾಗುತ್ತಿದೆ.

ಭಾರತದ ಕಡೆಯಿಂದ 14 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನೇತೃತ್ವ ವಹಿಸಿದ್ದರೆ ಚೀನಾ ಸೇನೆಯನ್ನು ದಕ್ಷಿಣ ಕ್ಸಿನ್ಜಿಯಾಂಗ್ ಮಿಲಿಟರಿ ವಿಭಾಗ ಕಾರ್ಪ್ಸ್ ಕಮಾಂಡರ್ ಮೇಜರ್ ಜನರಲ್ ಲಿನ್ ಲಿಯು ಪ್ರತಿನಿಧಿಸಿದ್ದಾರೆ. ಎರಡೂ ಕಡೆಯಿಂದ ಇನ್ನು 8 ಮಂದಿ ಅಧಿಕಾರಿಗಳು ಭಾಗವಹಿಸಿದ್ದರು. ಶಿಷ್ಠಾಚಾರ ಪ್ರಕಾರ, ಲೇಹ್ ನಲ್ಲಿ ಕಾರ್ಪ್ಸ್ ಕೇಂದ್ರ ಕಚೇರಿಗೆ ಸಭೆ ಮುಗಿಸಿಕೊಂಡು ಬಂದ ಲೆ. ಜ. ಸಿಂಗ್, ಸೇನಾ ಮುಖ್ಯಸ್ಥ ಎಂ ಎಂ ನಾರಾವಣೆ ಮತ್ತು ಉತ್ತರ ಭಾಗದ ಸೇನಾ ಕಮಾಂಡರ್ ಲೆ.ಜ.ವೈ ಕೆ ಜೋಷಿ ಅವರಿಗೆ ಮಾಹಿತಿ ನೀಡಿದ್ದಾರೆ.

ಪ್ರಧಾನ ಮಂತ್ರಿ ಸಚಿವಾಲಯಕ್ಕೆ ಸಹ ಮಾಹಿತಿ ನೀಡಿದ್ದು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸಹ ಸಭೆಯ ಮಾತುಕತೆಗಳ ಬಗ್ಗೆ ವಿಷಯ ರವಾನಿಸಲಾಗಿದೆ.ಗಡಿ ವಿವಾದ ಬಗೆಹರಿಸುವಿಕೆಗೆ ಇದೇ ಮೊದಲ ಬಾರಿಗೆ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ.

ಪೂರ್ವ ಲಡಾಕ್ ನ ಪೊಂಗೊಂಗ್ ಲೇಕ್ ನಲ್ಲಿ ಚೀನಾದ ಸೇನೆ ಮೇ ಆರಂಭದಲ್ಲಿ ನಿಯೋಜನೆಗೊಂಡ ನಂತರ ವಿವಾದ ಬಗೆಹರಿಸಲು ಈಗಾಗಲೇ 10ರಿಂದ 12 ಸುತ್ತಿನ ಮಾತುಕತೆ ನಡೆದಿದ್ದು ಫಲಪ್ರದವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com