ಪಟಾಕಿ ಸುತ್ತಿದ ಗೋಧಿ ಹಿಟ್ಟಿನ ಉಂಡೆ ತಿಂದು ಹಸುವಿನ ದವಡೆ ಸ್ಫೋಟ: ಹಿಮಾಚಲ ಪ್ರದೇಶದಲ್ಲಿ ಹೃದಯ ವಿದ್ರಾವಕ ಘಟನೆ

ಕೇರಳದಲ್ಲಿ ಗರ್ಭಿಣಿ ಕಾಡಾನೆಗೆ ಅನಾನಸು ಹಣ್ಣಿನೊಳಗೆ ವಿಷಕಾರಿ ಪಟಾಕಿ ಇಟ್ಟು ತಿನ್ನುವಂತೆ ಮಾಡಿ ಹತ್ಯೆ ಮಾಡಿದ ಕ್ರೂರತೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿರುವಾಗ ಹಿಮಾಚಲ ಪ್ರದೇಶದಲ್ಲಿಯೂ ಇಂಥಹದ್ದೇ ಘಟನೆ ನಡೆದಿದೆ.
ಗಾಯಗೊಂಡ ಹಸು
ಗಾಯಗೊಂಡ ಹಸು

ಧರಮ್ ಶಾಲಾ/ಮನಾಲಿ:ಕೇರಳದಲ್ಲಿ ಗರ್ಭಿಣಿ ಕಾಡಾನೆಗೆ ಅನಾನಸು ಹಣ್ಣಿನೊಳಗೆ ವಿಷಕಾರಿ ಪಟಾಕಿ ಇಟ್ಟು ತಿನ್ನುವಂತೆ ಮಾಡಿ ಹತ್ಯೆ ಮಾಡಿದ ಕ್ರೂರತೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿರುವಾಗ ಹಿಮಾಚಲ ಪ್ರದೇಶದಲ್ಲಿಯೂ ಇಂಥಹದ್ದೇ ಘಟನೆ ನಡೆದಿದೆ.

ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ಗೋಧಿಹಿಟ್ಟಿನಲ್ಲಿ ಪಟಾಕಿ ಸುತ್ತಿ ಇಟ್ಟಿದ್ದನ್ನು ತುಂಬು ಗರ್ಭಿಣಿ ಹಸು ತಿಂದು ಅದರ ದವಡೆ ಸಂಪೂರ್ಣವಾಗಿ ಸ್ಫೋಟಗೊಂಡು ನಿರಂತರವಾಗಿ ರಕ್ತ ಸುರಿಯುತ್ತಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಹಸುವಿನ ಮಾಲೀಕ ಗುರ್ಡಿಯಲ್ ಸಿಂಗ್ ಈ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅದು ವ್ಯಾಪಕವಾಗಿ ವೈರಲ್ ಆಗಿ #JusticeforNandini ಹ್ಯಾಶ್ ಟಾಗ್ ಟ್ರೆಂಡಿಯಾಗಿದೆ.ಹಸುವಿಗೆ ಚಿಕಿತ್ಸೆ ನೀಡಿದ ನಂತರ ಅದು ಕರುವಿಗೆ ಜನ್ಮ ನೀಡಿತು.
ನೆರೆ ಮನೆಯ ನಂದ್ ಲಾಲ್ ಆರೋಪಿ ಎಂದು ಗುರುತಿಸಿ ನಿನ್ನೆ ಸಂಜೆ ಬಂಧಿಸಲಾಗಿದೆ.

ಮುಖ್ಯಮಂತ್ರಿ ಹೇಳಿಕೆ: ಈ ಹೀನಕೃತ್ಯ ಜನರಲ್ಲಿ ಸಿಟ್ಟು, ಆಕ್ರೋಶ ತರಿಸಿದೆ. ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಘಟನೆಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಬಿಲಾಸ್ಪುರ್ ಎಸ್ಪಿ ದಿವಾಕರ್ ಶರ್ಮ, ಸೆಕ್ಷನ್ 286ರಡಿ ಮತ್ತು ಪ್ರಾಣಿಗಳ ವಿರುದ್ಧ ಹಿಂಸೆ ತಡೆ ಕಾಯ್ದೆ ಸೆಕ್ಷನ್ 11ರಡಿ ಮೇ 26ರಂದು ಕೇಸು ದಾಖಲಿಸಲಾಗಿತ್ತು. ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ ಎಂದರು.

ಘಟನೆ ಹಿಂದೆ ಕೆಲ ದುಷ್ಕರ್ಮಿಗಳ ಕೈವಾಡವಿದೆ ಎಂದು ಹಸುವಿನ ಮಾಲೀಕರು ಆರೋಪಿಸಿದ್ದಾರೆ. ಬೆಳೆಗಳಿಗೆ ಹಾನಿಯನ್ನುಂಟುಮಾಡುವ ನೀಲಿ ಎತ್ತುಗಳಂತಹ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಹಿಮಾಚಲ ಪ್ರದೇಶದ ರೈತರು ತಮ್ಮ ಜಮೀನುಗಳಲ್ಲಿ ಗೋಧಿ ಹಿಟ್ಟಿನಲ್ಲಿ ಪಟಾಕಿ, ಸಿಡಿಮದ್ದುಗಳನ್ನು ಸುತ್ತಿ ಇಡುವುದು ಸಾಮಾನ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com