ಇರಾನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲಿರುವ ಐಎನ್ಎಸ್ ಶಾರ್ದೂಲ್ 

ಶ್ರೀಲಂಕಾ ಹಾಗೂ ಮಾಲ್ಡಿವ್ಸ್ ನಲ್ಲಿ ಸಿಲುಕಿಕೊಂಡ ಭಾರತೀಯರನ್ನು ಕರೆತಂದ ಬಳಿಕ ಇರಾನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಐಎನ್ಎಸ್ ಶಾರ್ದೂಲ್ ಮೂಲಕ ವಾಪಸ್ ಕರೆತರಲಾಗುತ್ತಿದೆ. 
ಇರಾನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲಿರುವ ಐಎನ್ಎಸ್ ಶಾರ್ದೂಲ್
ಇರಾನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲಿರುವ ಐಎನ್ಎಸ್ ಶಾರ್ದೂಲ್

ನವದೆಹಲಿ: ಶ್ರೀಲಂಕಾ ಹಾಗೂ ಮಾಲ್ಡಿವ್ಸ್ ನಲ್ಲಿ ಸಿಲುಕಿಕೊಂಡ ಭಾರತೀಯರನ್ನು ಕರೆತಂದ ಬಳಿಕ ಇರಾನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಐಎನ್ಎಸ್ ಶಾರ್ದೂಲ್ ಮೂಲಕ ವಾಪಸ್ ಕರೆತರಲಾಗುತ್ತಿದೆ. 

ಆಪರೇಷನ್ ಸಮುದ್ರ ಸೇತುವಿನ ಮೊದಲ ಭಾಗವಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು ಇರಾನ್ ನ ಬಂದಾರ್ ಅಬ್ಬಾಸ್ ನಿಂದ ಗುಜರಾತ್ ನ ಪೋರ್ ಬಂದರ್ ಗೆ ಭಾರತೀಯರನ್ನು ಕರೆತರಲಾಗುತ್ತಿದೆ. 

ಕೊರೋನಾ ಹಿನ್ನೆಲೆಯಲ್ಲಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಘೋಷಿಸಿರುವ ವಂದೇ ಭಾರತ್ ಮಿಷನ್ ನ ಮೂರನೇ ಹಂತ ಇದಾಗಿದೆ. 

ಸಮುದ್ರ ಸೇತುವಿನ ಎರಡನೇ ಭಾಗದಲ್ಲಿ ಇರಾನ್ ನಿಂದ ತಮಿಳುನಾಡು ಹಾಗೂ ಕೇರಳದ ಮೀನುಗಾರರನ್ನು ಕರೆತರಲಾಗುತ್ತದೆ. ಇರಾನ್ ನ ದಕ್ಷಿಣ ಪ್ರಾಂತ್ಯದಲ್ಲಿ ಭಾರತದ 1000 ಮೀನುಗಾರರು ಸಿಲುಕಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com