ಕೊರೋನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; ಮಿಜೋರಾಂನಲ್ಲಿ 2ವಾರಗಳ ಸಂಪೂರ್ಣ ಲಾಕ್ ಡೌನ್!

ಮಾರಕ ಕೊರೋನಾ ವೈರಸ್ ಲಾಕ್ ಡೌನ್ ಬಳಿಕ ಇಡೀ ದೇಶ ಅನ್ ಲಾಕ್ ನತ್ತ ಮುಖ ಮಾಡಿರುವಂತೆಯೇ ಅತ್ತ ಮಿಜೋರಾಂ ಸರ್ಕಾರ ಮಾತ್ರ 2 ವಾರಗಳ ಸಂಪೂರ್ಣ ಲಾಕ್ ಡೌನ್ ಹೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಐಜ್ವಾಲ್: ಮಾರಕ ಕೊರೋನಾ ವೈರಸ್ ಲಾಕ್ ಡೌನ್ ಬಳಿಕ ಇಡೀ ದೇಶ ಅನ್ ಲಾಕ್ ನತ್ತ ಮುಖ ಮಾಡಿರುವಂತೆಯೇ ಅತ್ತ ಮಿಜೋರಾಂ ಸರ್ಕಾರ ಮಾತ್ರ 2 ವಾರಗಳ ಸಂಪೂರ್ಣ ಲಾಕ್ ಡೌನ್ ಹೇರಿದೆ.

ಹೌದು.. ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿ ಕೊರೋನಾ ಮುಕ್ತವಾಗುತ್ತಿರುವ ಈಶಾನ್ಯ ಭಾರತದ ರಾಜ್ಯ ಮಿಜೋರಾಂ ನಲ್ಲಿ ದಿಢೀರನೇ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡಬಂದ ಹಿನ್ನಲೆಯಲ್ಲಿ ಮಿಜೋರಾಂ ಸರ್ಕಾರ 2 ವಾರಗಳ ಕಟ್ಟುನಿಟ್ಟಿನ ಸಂಪೂರ್ಣ ಲಾಕ್ ಡೌನ್ ಹೇರಿದೆ.  ಇದೇ ಜೂನ್ 9 ರಿಂದ 2 ವಾರಗಳ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾಗಲಿದೆ ಎಂದು ಸಿಎಂ ಝೋರಂತಂಗಾ ಹೇಳಿದ್ದಾರೆ. \

ಅಂತೆಯೇ ಮಿಜೋರಾಂನಲ್ಲಿ ಕ್ವಾರಂಟೈನ್ ಅವಧಿಯನ್ನು 21 ದಿನಗಳಿಗೆ ಏರಿಕೆ ಮಾಡಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಲಾಕ್ ಡೌನ್ ಜಾರಿಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com