ಜಮ್ಮು-ಕಾಶ್ಮೀರದಲ್ಲಿ ಈ ವರ್ಷ 100 ಕ್ಕೂ ಹೆಚ್ಚು ಭಯೋತ್ಪಾದಕರ ಹತ್ಯೆ!

ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದು, ಈಗ ಕಣಿವೆ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ 125 ಅಲ್ಟ್ರಾ ಟೆರರಿಸ್ಟ್ ಗಳನ್ನು, 25 ವಿದೇಶಿ ಭಯೋತ್ಪಾದಕರನ್ನು ಟಾರ್ಗೆಟ್ ಮಾಡಿದೆ.
ಜಮ್ಮು-ಕಾಶ್ಮೀರದಲ್ಲಿ ಈ ವರ್ಷ 100 ಕ್ಕೂ ಹೆಚ್ಚು ಭಯೋತ್ಪಾದಕರ ಹತ್ಯೆ!
ಜಮ್ಮು-ಕಾಶ್ಮೀರದಲ್ಲಿ ಈ ವರ್ಷ 100 ಕ್ಕೂ ಹೆಚ್ಚು ಭಯೋತ್ಪಾದಕರ ಹತ್ಯೆ!

ನವದೆಹಲಿ: ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದು, ಈಗ ಕಣಿವೆ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ 125 ಅಲ್ಟ್ರಾ ಟೆರರಿಸ್ಟ್ ಗಳನ್ನು, 25 ವಿದೇಶಿ ಭಯೋತ್ಪಾದಕರನ್ನು ಟಾರ್ಗೆಟ್ ಮಾಡಿದೆ.

"ಸೇನಾ ಅಧಿಕಾರಿ, ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಈ ಬಗ್ಗೆ ಮಾಹಿತಿ ನೀಡಿದ್ದು, ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಭದ್ರತಾ ಸಿಬ್ಬಂದಿಗಳು ಭಾರಿ ದಂಡವನ್ನೇ ತೆರಬೇಕಾಗಿದ್ದು, 29 ಸಿಬ್ಬಂದಿಗಳನ್ನು ಕಳೆದುಕೊಳ್ಳಬೇಕಿದೆ. ಈ ಪೈಕಿ ಕೆಲವು ಅಧಿಕಾರಿಗಳೂ ಕಾರ್ಯಾಚರಣೆ ವೇಳೆ ಪ್ರಾಣತ್ಯಾಗ ಮಾಡಿದ್ದಾರೆ" ಎಂದು ಹೇಳಿದ್ದಾರೆ.

ಜೂ.08 ರಂದು ಬೆಳಿಗ್ಗೆ ನಾಲ್ವರು ಭಯೋತ್ಪಾದಕರನ್ನು ಶೋಪಿಯಾನ್ ನ ಪಿಂಜೋರದಲ್ಲಿ ಹತ್ಯೆ ಮಾಡುವ ಮೂಲಕ ಸೇನೆ ಈ ವರ್ಷ ಬರೊಬ್ಬರಿ 101 ಉಗ್ರರನ್ನು ಹತ್ಯೆ ಮಾಡಿದೆ, ಭಯೋತ್ಪಾದಕರು 11 ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com