ಸಿಎಂ ಕೆಸಿಆರ್ - ಚಿರಂಜೀವಿ
ಸಿಎಂ ಕೆಸಿಆರ್ - ಚಿರಂಜೀವಿ

ಕೊವಿಡ್-19 ಮಾರ್ಗಸೂಚಿ ಪ್ರಕಾರ ಸಿನಿಮಾ, ಟಿವಿ ಚಿತ್ರೀಕರಣಕ್ಕೆ ತೆಲಂಗಾಣ ಸರ್ಕಾರ ಅಸ್ತು

ಕೊವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸಿನಿಮಾ, ಟಿವಿ ಚಿತ್ರೀಕರಣವನ್ನು ಪುನಾರಂಭಿಸಲು ತೆಲಂಗಾಣ ಸರ್ಕಾರ ಸೋಮವಾರ ಅನುಮತಿ ನೀಡಿದೆ. ಆದರೆ ಕೇಂದ್ರದ ಮಾರ್ಗಸೂಚಿ ಅನುಸಾರ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿಲ್ಲ.

ಹೈದರಾಬಾದ್: ಕೊವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸಿನಿಮಾ, ಟಿವಿ ಚಿತ್ರೀಕರಣವನ್ನು ಪುನಾರಂಭಿಸಲು ತೆಲಂಗಾಣ ಸರ್ಕಾರ ಸೋಮವಾರ ಅನುಮತಿ ನೀಡಿದೆ. ಆದರೆ ಕೇಂದ್ರದ ಮಾರ್ಗಸೂಚಿ ಅನುಸಾರ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿಲ್ಲ.

ರಾಜ್ಯದಲ್ಲಿ ಲಾಕ್ ಡೌನ್ ಷರತ್ತುಗಳ ಅನ್ವಯ ಮತ್ತು ಕೊವಿಡ್-19 ಮಾರ್ಗಸೂಚಿಗಳ ಅನುಸಾರ ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳ ಚಿತ್ರೀಕರಣಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರು ಅನುಮತಿ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚಲನಚಿತ್ರ ಅಥವಾ ಟಿವಿ ಶೂಟಿಂಗ್‌ಗಳನ್ನು ಸೀಮಿತ ಕೆಲಸಗಾರರೊಂದಿಗೆ ರಾಜ್ಯದಲ್ಲಿ ನಡೆಸಬಹುದು ಮತ್ತು ಕಾಲಕಾಲಕ್ಕೆ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಬೇಕು ರಾವ್ ಸೂಚಿಸಿದ್ದಾರೆ.

ಪೋಸ್ಟ್-ಪ್ರೊಡಕ್ಷನ್ ಕೆಲಸಗಳನ್ನು ಸಹ ಅದೇ ಮಾರ್ಗದಲ್ಲಿ ನಡೆಸಲು ಅನುಮತಿಸಲಾಗಿದೆ. ಕೇಂದ್ರದ ಮಾರ್ಗಸೂಚಿಗಳು ಚಿತ್ರಮಂದಿರಗಳಿಗೆ ನಿರ್ಬಂಧ ವಿಧಿಸಿರುವುದರಿಂದ ಸಾರ್ವಜನಿಕರಿಗೆ ಚಿತ್ರಮಂದಿರಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಲು ನಿರಾಕರಿಸಿದೆ.

ಇತ್ತೀಚಿಗೆ ಮೆಗಾ ಸ್ಟಾರ್ ಚಿರಂಜೀವಿ ಸೇರಿದಂತೆ ತೆಲುಗು ಚಿತ್ರೋದ್ಯಮದ ಹಲವು ಗಣ್ಯರು ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾಗಿ, ಚಲನಚಿತ್ರ / ಟಿವಿ ಶೂಟಿಂಗ್ ಮತ್ತು ಪೋಸ್ಟ್-ಪ್ರೊಡಕ್ಷನ್ ಕೆಲಸಗಳಿಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಅಲ್ಲದೆ ಸಾರ್ವಜನಿಕರಿಗೆ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಕೇಳಿದ್ದರು.

Related Stories

No stories found.

Advertisement

X
Kannada Prabha
www.kannadaprabha.com