ಅಂಫಾನ್ ಚಂಡಮಾರುತ ವಿರುದ್ಧ ಹೋರಾಡಿದ್ದ 50 NDRF ಸಿಬ್ಬಂದಿಗೆ ಕೊರೋನಾ!

ಅಂಫಾನ್ ಚಂಡಮಾರುತ ವೇಳೆ ಕರ್ತವ್ಯ ನಿರ್ವಹಿಸಿದ್ದ 50 NDRF ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ.
ಎನ್‌ಡಿಆರ್‌ಎಫ್ ಸಿಬ್ಬಂದಿ
ಎನ್‌ಡಿಆರ್‌ಎಫ್ ಸಿಬ್ಬಂದಿ

ನವದೆಹಲಿ: ಅಂಫಾನ್ ಚಂಡಮಾರುತ ವೇಳೆ ಕರ್ತವ್ಯ ನಿರ್ವಹಿಸಿದ್ದ 50 NDRF ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ.

ಅಂಫಾನ್ ಚಂಡಮಾರುತ ಸಮಯದಲ್ಲಿ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಕರ್ತವ್ಯ ನಿರತರಾಗಿದ್ದ 50 ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ ಎಂದು ಎನ್‌ಡಿಆರ್‌ಎಫ್ ಮಾಹಿತಿ ನೀಡಿದೆ. 

ಇದೇ ವೇಳೆ ದೆಹಲಿಯಲ್ಲಿದ್ದ 26 ಸಿಬ್ಬಂದಿಗೂ ಕೊರೋನಾ ಸೋಂಕು ತಗುಲಿದ್ದು ಇದರೊಂದಿಗೆ ಒಟ್ಟಾರೆ 76 ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ. 

ಸದ್ಯ ಇವರನ್ನೆಲ್ಲಾ ಕೋವಿಡ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ 50 ಸಿಬ್ಬಂದಿಯಲ್ಲಿ ಕೊರೋನಾ ಲಕ್ಷಣಗಳೇ ಇಲ್ಲ ಎಂದು ಎನ್‌ಡಿಆರ್‌ಎಫ್ ಮುಖ್ಯಸ್ಥ ಎಸ್ಎನ್ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com