ಶಿವಸೇನೆ ಟೀಕೆ ಬಳಿಕ ಬಾಂದ್ರಾ ಟರ್ಮಿನಸ್‌ನಲ್ಲಿ ಸೋನು ಸೂದ್-ವಲಸಿಗರ ಭೇಟಿಗೆ ಪೋಲೀಸರ ಅಡ್ಡಿ

ಮುಂಬಯಿಯಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಟ್ಟು ಅವರನ್ನು ಅವರ ಊರುಗಳಿಗೆ ಕಳಿಸಿ ಮಾನವೀಯತೆ ಮೆರೆದಿದ್ದ ಬಾಲಿವುಡ್ ನಟ ಸೋನು ಸೂದ್ ಅವರನ್ನು ಕಾರ್ಮಿಕರನ್ನು ಭೇಟಿಯಾಗದಂತೆ ಬಾಂದ್ರಾ ಟರ್ಮಿನಸ್ ಹೊರಗೆ ಪೋಲೀಸರು ತಡೆದಿದ್ದಾರೆ. 
ಸೋನು ಸೂದ್
ಸೋನು ಸೂದ್

ಮುಂಬೈ: ಮುಂಬಯಿಯಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಟ್ಟು ಅವರನ್ನು ಅವರ ಊರುಗಳಿಗೆ ಕಳಿಸಿ ಮಾನವೀಯತೆ ಮೆರೆದಿದ್ದ ಬಾಲಿವುಡ್ ನಟ ಸೋನು ಸೂದ್ ಅವರನ್ನು ಕಾರ್ಮಿಕರನ್ನು ಭೇಟಿಯಾಗದಂತೆ ಬಾಂದ್ರಾ ಟರ್ಮಿನಸ್ ಹೊರಗೆ ಪೋಲೀಸರು ತಡೆದಿದ್ದಾರೆ. ನಟ ಸೂದ್ ಬಿಜೆಪಿ ರಾಜಕೀಯ ಪ್ರೇರಣೆಯಿಂದ ಈ ಕೆಲಸ ಮಾಡುತ್ತಿದ್ದಾರೆ ಎಂದ ಶಿವಸೇನೆ ಆರೋಪದ ಬಳಿಕ ಪೋಲೀಸರು ಈ ಕ್ರಮ ಜರುಗಿಸಿದ್ದಾರೆ.

ಕಾರ್ಮಿಕರನ್ನು ಭೇಟಿಯಾಗಲು ಸೋಮವಾರ ರಾತ್ರಿ ನಿಲ್ದಾಣಕ್ಕೆ ತಲುಪಿದಾಗ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ನಟನಿಗೆ ಒಳಪ್ರವೇಶಿಸಲು ಅನುಮತಿ ನೀಡಿಲ್ಲವೆಂದು  ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ  ಆದರೆ ಈ ಸಂಬಂಧ  ಅವರಿಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ.

ವಲಸೆ ಕಾರ್ಮಿಕರು ಬಾಂದ್ರಾ ಟರ್ಮಿನಸ್‌ನಿಂದ ಉತ್ತರ ಪ್ರದೇಶಕ್ಕೆ ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಸಬೇಕಿತ್ತು.ನಿರ್ಮಲ್ ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಶಶಿಕಾಂತ್ ಭಂಡಾರೆ, ಹೇಳಿದಂತೆ  "ನಟನನ್ನು ಆರ್‌ಪಿಎಫ್  ತಡೆದಿದೆ. ನಟ ತಮ್ಮ ತಮ್ಮ ಊರಿಗೆ ಹೊರಟಿದ್ದ ಕಾರ್ಮಿಕರನ್ನು ಭೇಟಿಯಾಗಲು ಬಯಸಿದ್ದರು. ಈ ಬಗ್ಗೆ ನಮಗೆ ಈವರೆಗೆ ಯಾವುದೇ ದೂರು ಬಂದಿಲ್ಲ" ಎಂದು ಹೇಳಿದರು.ಲಾಕ್ ಡೌನ್ ಮಧ್ಯೆ ಮಹಾರಾಷ್ಟ್ರದಲ್ಲಿ ಸಿಲುಕಿರುವ ಉತ್ತರ ಭಾರತದಿಂದ ವಲಸೆ ಬಂದ ಕಾರ್ಮಿಕರಿಗೆ "ಸಹಾಯ ನೀಡಲು" ಬಿಜೆಪಿ ಸೂದ್ ಅವರನ್ನು ಮುಂದು ಬಿಟ್ಟಿದೆಯೆ  ಎಂದು ಶಿವಸೇನೆ ಸಂಸದ ಸಂಜಯ್ ರೌತ್ ಭಾನುವಾರ ಪ್ರಶ್ನಿಸಿದ್ದರು.

ಸೇನಾ ಮುಖವಾಣಿ "ಸಾಮ್ನಾ"ದಲ್ಲಿ  ತನ್ನ ಸಾಪ್ತಾಹಿಕ ಅಂಕಣ' ರೋಖೋಕ್ 'ನಲ್ಲಿ, ಲಾಕ್ ಡೌನ್ ಸಮಯದಲ್ಲಿ ಮಹಾರಾಷ್ಟ್ರದ ಸಾಮಾಜಿಕ ವಲಯದಲ್ಲಿ ಹಠಾತ್ತನೆ ಸೂದ್ "ಮಹಾತ್ಮ"ನಾಗಿ ಅವತರಿಸಿದ್ದಾರೆ, ಇದರ ಹಿಂದಿನ ಕಾರಣವೇನು ಎಂದು ರೌತ್ ಪ್ರಶ್ನಿಸಿದ್ದಾರೆ.2019 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಸೂದ್ ವಿರುದ್ಧದ "ಕುಟುಕು ಕಾರ್ಯಾಚರಣೆ" ಯನ್ನು ರೌತ್ ಉಲ್ಲೇಖಿಸಿದ್ದು, ಬಿಜೆಪಿ ನೇತೃತ್ವದ ಸರ್ಕಾರವನ್ನು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ವಿವಿಧ ವೇದಿಕೆಗಳಲ್ಲಿ ಉತ್ತೇಜಿಸಲುಸೂದ್ ಒಪ್ಪಿಗೆ ಸೂಚಿಸಿದ್ದರೆಂದು ಅವರು ಹೇಳಿದರು

ಆದರೆ ಇನ್ನೊಂದೆಡೆ ಮುಖ್ಯಮಂತ್ರಿ ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಅತಂತ್ರರಾಗಿರುವ ವಲಸೆ ಕಾರ್ಮಿಕರಿಗೆ ಬಸ್ಸುಗಳನ್ನು ವ್ಯವಸ್ಥೆ ಮಾಡುವ ಸೂದ್ ಅವರ ಉಪಕ್ರಮವನ್ನು ಶ್ಲಾಘಿಸಿದರು ಭಾನುವಾರ ರಾತ್ರಿ ಉಪನಗರ ಬಾಂದ್ರಾದಲ್ಲಿರುವ 'ಮಾತೋಶ್ರೀ' ಎಂಬ ನಿವಾಸದಲ್ಲಿ ನಟ ಠಾಕ್ರೆ ಅವರನ್ನು ಭೇಟಿಯಾದರು. ಲಾಕ್ ಡೌನ್ ನಡುವೆ ಸಿಲುಕಿರುವ ವಲಸೆ ಕಾರ್ಮಿಕರಿಗಾಗಿ ಸೂದ್ ಅವರ ಕೆಲಸಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಬೆಂಬಲ ನೀಡಿದ್ದು, ಮಹಾರಾಷ್ಟ್ರ ಸರ್ಕಾರ ಈ ನಟನನ್ನು ಟೀಕಿಸಿರುವುದನ್ನು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com