ಜೂನ್ 6 ರಂದು ನಡೆದ ಭಾರತ-ಚೀನಾ ಮಾತುಕತೆ ಸಕಾರಾತ್ಮಕವಾಗಿದೆ: ರಾಜನಾಥ್ ಸಿಂಗ್

ಪೂರ್ವ ಲಡಾಖ್‌ನ ಗಡಿನಿಯಂತ್ರಣಾ ರೇಖೆಯಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಎದುರಾಗಿರುವ ಬಿಕ್ಕಟ್ಟಿನ ಸಂಬಂಧ ಜೂನ್ 6 ರಂದು ‘ಚೀನಾ ಜತೆಗಿನ ಭಾರತದ ಸೇನಾ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆ ಸಕಾರಾತ್ಮಕವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‍ ಸಿಂಗ್  ಹೇಳಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ನವದೆಹಲಿ: ಪೂರ್ವ ಲಡಾಖ್‌ನ ಗಡಿನಿಯಂತ್ರಣಾ ರೇಖೆಯಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಎದುರಾಗಿರುವ ಬಿಕ್ಕಟ್ಟಿನ ಸಂಬಂಧ ಜೂನ್ 6 ರಂದು ‘ಚೀನಾ ಜತೆಗಿನ ಭಾರತದ ಸೇನಾ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆ ಸಕಾರಾತ್ಮಕವಾಗಿದ್ದು, ಈ ಮಾತುಕತೆಗಳನ್ನು ಮುಂದುವರಿಸಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ' ಎಂದು ರಕ್ಷಣಾ ಸಚಿವ ರಾಜನಾಥ್‍ ಸಿಂಗ್  ಹೇಳಿದ್ದಾರೆ.

ಬಿಜೆಪಿ ಮಹಾರಾಷ್ಟ್ರ ಘಟಕದ ಜನಸಂವಾದ್ ವರ್ಚ್ಯುಯಲ್‍ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ-ಚೀನಾ ಗಡಿಯಲ್ಲಿನ ಪರಿಸ್ಥಿತಿಗೆ ಸಂಬಂಧ ಸಮಸ್ಯೆ ಬಗೆಹರಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಯತ್ನಿಸುತ್ತಿದೆ. ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ದೀರ್ಘಕಾಲದವರೆಗೆ ನಡೆಯುತ್ತಿದೆ. ಸಾಧ್ಯವಾದಷ್ಟು ಬೇಗ ಇದನ್ನು ಪರಿಹರಿಸುವುದನ್ನು ನಾವು ಇಚ್ಛಿಸುತ್ತೇವೆ ಎಂದು ತಿಳಿಸಿದ್ದಾರೆ.

ದೇಶದ ನಾಯಕತ್ವ ಶಕ್ತಿಶಾಲಿ ಕೈಯಲ್ಲಿದೆ ಎಂದು ನಾನು ಜನರಿಗೆ ಭರವಸೆ ನೀಡಲು ಬಯಸುತ್ತೇನೆ. ಭಾರತದ ಘನತೆ ಮತ್ತು ಸ್ವಾಭಿಮಾನದ ಬಗ್ಗೆ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.

ಮೇ 5 ಮತ್ತು 6 ರ ಮಧ್ಯರಾತ್ರಿಯಲ್ಲಿ ಪೂರ್ವ ಲಡಾಖ್‌ನ ಪಾಂಗೊಂಗ್ ತ್ಸೋ ಸರೋವರದ ಉತ್ತರ ಭಾಗದ ಫಿಂಗರ್ ಫೈವ್ ಬಳಿ ಭಾರತೀಯ ಸೇನೆ ಮತ್ತು ಚೀನಾದ ಸೇನಾ ಸೈನಿಕರು ಪರಸ್ಪರ ಘರ್ಷಣೆ ನಡೆಸಿದರು. ಮತ್ತೆ, ಮೇ 9 ರಂದು ಸಿಕ್ಕಿಂನ ಮುಗುಥಾಂಗ್ ಉಪ ವಲಯದ ನಕು ಲಾ ಪಾಸ್ ಬಳಿ ಘರ್ಷಣೆ ಸಂಭವಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com