ಲಡಾಕ್ ಬಿಕ್ಕಟ್ಟು: ಲಡಾಕ್ ನ ಮೂರು ಪ್ರದೇಶಗಳಲ್ಲಿ ಹಿಂದಕ್ಕೆ ಸರಿದ ಉಭಯ ಸೇನಾ ತಂಡ

ಲಡಾಕ್ ನಲ್ಲಿ ಚೀನಾ ತೆಗೆದಿರುವ ಗಡಿ ಕ್ಯಾತೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ ಭಾರತ, ಚೀನಾ ಸೇನೆ ಮೂರು ಸ್ಥಳಗಳಲ್ಲಿ ಹಿಂದೆ ಸರಿದಿವೆ. 
ಲಡಾಕ್ ಬಿಕ್ಕಟ್ಟು: ಲಡಾಕ್ ನ ಮೂರು ಪ್ರದೇಶಗಳಲ್ಲಿ ಹಿಂದಕ್ಕೆ ಸರಿದ ಉಭಯ ಸೇನಾ ತಂಡ
ಲಡಾಕ್ ಬಿಕ್ಕಟ್ಟು: ಲಡಾಕ್ ನ ಮೂರು ಪ್ರದೇಶಗಳಲ್ಲಿ ಹಿಂದಕ್ಕೆ ಸರಿದ ಉಭಯ ಸೇನಾ ತಂಡ

ನವದೆಹಲಿ: ಲಡಾಕ್ ನಲ್ಲಿ ಚೀನಾ ತೆಗೆದಿರುವ ಗಡಿ ಕ್ಯಾತೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ ಭಾರತ, ಚೀನಾ ಸೇನೆ ಮೂರು ಸ್ಥಳಗಳಲ್ಲಿ ಹಿಂದೆ ಸರಿದಿವೆ. 

ಈ ವಾರ ಮುಂದಿನ ಸುತ್ತಿನ ಸೇನಾ ಮಾತುಕತೆ ನಿಗದಿಯಾಗಿದ್ದು, ಇದಕ್ಕೂ ಮುನ್ನ ಈಶಾನ್ಯ ಲಡಾನ್ ನ 3 ಸ್ಥಳಗಳಿಂದ ಉಭಯ ಸೇನಾ ಪಡೆಗಳು ಹಿಂದೆ ಸರಿದಿವೆ. ಗಸ್ತು ಪಾಯಿಂಟ್ 14 (ಗಾಲ್ವನ್ ಪ್ರದೇಶ), 15, ಹಾಟ್ ಸ್ಪ್ರಿಂಗ್ಸ್ ಪ್ರದೇಶ ಸೇರಿದಂತೆ ಹಲವು ಸ್ಥಳಗಳಲ್ಲಿ ಎರಡೂ ಸೇನೆಗಳ ನಡುವೆ ಮಾತುಕತೆ ಈ ವಾರ ನಡೆಯಲಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿರುವುದನ್ನು ಎಎನ್ಐ ವರದಿ ಮಾಡಿದೆ.

ಲೆಫ್ಟಿನೆಂಟ್ ಜನರಲ್ ಮಟ್ಟದ ಮಾತುಕತೆಗಳು ಜೂ.06 ರಂದು ನಡೆದಿತ್ತು. ಈ ಬೆನ್ನಲ್ಲೇ ಚೀನಾ ಈಶಾನ್ಯ ಲಡಾಕ್ ನಿಂದ ಗಾಲ್ವನ್ ಕಣಿವೆ, ಪಿಪಿ-15, ಹಾಟ್ ಸ್ಪ್ರಿಂಗ್ಸ್ ತನ್ನ ಪಡೆಯನ್ನು 2.5 ಕಿ.ಮೀಟರ್ ನಷ್ಟು ಹಿಂದಕ್ಕೆ ಕರೆಸಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ಸಹ ತನ್ನ ಸೇನಾಪಡೆಯನ್ನು ಹಿಂಪಡೆದಿದೆ. ಚೀನಾದ ಚಟುವಟಿಕೆಗಳು ಪ್ರಾರಂಭವಾಗಿದ್ದದ್ದೂ ಸಹ ಈಶಾನ್ಯ ಲಡಾಕ್ ನಲ್ಲಿಯೇ ಎಂಬುದು ಗಮನಾರ್ಹ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com