ಜವಹರಲಾಲ್ ನೆಹರೂ ಚೀನಾ ಬಗ್ಗೆ ಮಾಡಿದ್ದ ಐತಿಹಾಸಿಕ ಪ್ರಮಾದ ರಾಹುಲ್ ಗಾಂಧಿಗೆ ಗೊತ್ತಿಲ್ಲವೇ?: ಬಿಜೆಪಿ ಪ್ರಶ್ನೆ

ಭಾರತ-ಚೀನಾ ಗಡಿ ಭಾಗದ ವಾಸ್ತವ ನಿಯಂತ್ರಣ ರೇಖೆ(ಎಲ್ ಎಸಿ)ಯ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ನೆಹರೂ ಕಾಲದಲ್ಲಿ ಮಾಡಿದ ಅತಿದೊಡ್ಡ ಪ್ರಮಾದವೇ ಇಂದಿನ ಪರಿಸ್ಥಿತಿಗೆ ಕಾರಣ ಎಂದು ಬಿಜೆಪಿ ತಿರುಗೇಟು ನೀಡಿದೆ. ಅದಕ್ಕೆ ಸೇನೆಯ ಮಾಜಿ ಅಧಿಕಾರಿಗಳು ನೀಡಿರುವ ಹೇಳಿಕೆಯನ್ನು ಬಿಜೆಪಿ ಕೊಟ್ಟಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ನವದೆಹಲಿ:ಭಾರತ-ಚೀನಾ ಗಡಿ ಭಾಗದ ವಾಸ್ತವ ನಿಯಂತ್ರಣ ರೇಖೆ(ಎಲ್ ಎಸಿ)ಯ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ನೆಹರೂ ಕಾಲದಲ್ಲಿ ಮಾಡಿದ ಅತಿದೊಡ್ಡ ಪ್ರಮಾದವೇ ಇಂದಿನ ಪರಿಸ್ಥಿತಿಗೆ ಕಾರಣ ಎಂದು ಬಿಜೆಪಿ ತಿರುಗೇಟು ನೀಡಿದೆ. ಅದಕ್ಕೆ ಸೇನೆಯ ಮಾಜಿ ಅಧಿಕಾರಿಗಳು ನೀಡಿರುವ ಹೇಳಿಕೆಯನ್ನು ಬಿಜೆಪಿ ಕೊಟ್ಟಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತ-ಚೀನಾ ಗಡಿ ವಿವಾದದ ಬಗ್ಗೆ ನೀಡುತ್ತಿರುವ ಟ್ವೀಟ್ ಗಳು ಮತ್ತು ಹೇಳಿಕೆಗಳು ಅವರಲ್ಲಿ ಜ್ಞಾನದ ಕೊರತೆಯಿರುವುದನ್ನು ಎತ್ತಿ ತೋರಿಸುತ್ತಿದೆ. ಅಥವಾ ಅವರ ಮುತ್ತಾತ ಜವಹರಲಾಲ್ ನೆಹರೂರವರು ಮಾಡಿರುವ ಐತಿಹಾಸಿಕ ಪ್ರಮಾದದ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆಯೋ ಗೊತ್ತಿಲ್ಲ, ನೆಹರೂರವರ ಕಾಲದಲ್ಲಿಯೇ ಹರಿವಾಣದಲ್ಲಿಟ್ಟು ಟಿಬೆಟ್ ನ್ನು ಚೀನಾಕ್ಕೆ ದಾನ ಮಾಡಲಾಯಿತು, ಚೀನಾ ಅಲ್ಲಿ ಅಕ್ಸೈ ಚಿನ್ ಮೂಲಕ ರಸ್ತೆ ನಿರ್ಮಾಣ ಮಾಡಿ ನೆಹರೂ ಪ್ರಧಾನಿಯಾಗಿದ್ದಾಗಲೇ ಅತಿಕ್ರಮಿಸಿತು ಎಂಬುದು ರಾಹುಲ್ ಗಾಂಧಿಯವರಿಗೆ ಗೊತ್ತಿಲ್ಲವೇ ಎಂದು ಸೇನೆಯ ಮಾಜಿ ಹಿರಿಯ ಅಧಿಕಾರಿಗಳು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿದೆ.

ಹಿಂದಿನ ಸರ್ಕಾರಗಳು ಗಡಿ ಮೂಲಸೌಕರ್ಯ ಅಭಿವೃದ್ಧಿಯನ್ನು ಕೈಗೆತ್ತಿಕೊಂಡಿದ್ದರೆ ಮತ್ತು ಪ್ರತಿಕೂಲವಾದ ಎದುರಾಳಿಯನ್ನು ಎದುರಿಸಲು ಸಶಸ್ತ್ರ ಪಡೆಗಳನ್ನು ಆಧುನೀಕರಿಸಿದ್ದರೆ, ಚೀನಾದ ಯಾವುದೇ ದುಷ್ಕೃತ್ಯವನ್ನು ತಡೆಯಲು ಭಾರತ ಇನ್ನೂ ಹೆಚ್ಚು ಸಶಕ್ತವಾಗುತ್ತಿತ್ತು. ಈ ದೇಶವನ್ನು ದೀರ್ಘಕಾಲ ಆಳಿದ ಕಾಂಗ್ರೆಸ್ ಗಡಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿರ್ಲಕ್ಷ್ಯ ಮಾಡಿದ್ದಕ್ಕೆ ನೇರ ಹೊಣೆ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com