ಕೊರೋನಾ ವೈರಸ್: ಚೀನಾದ ವುಹಾನ್ ಮೀರಿಸಿದ ಮುಂಬೈ, 51 ಸಾವಿರ ಗಡಿ ದಾಟಿದ ಸೋಂಕಿತಕ ಸಂಖ್ಯೆ

ಮಾರಕ ಕೊರೋನಾ ವೈರಸ್ ಗೆ ವಾಣಿಜ್ಯ ರಾಜಧಾನಿ ಮುಂಬೈ ತತ್ತರಿಸಿ ಹೋಗಿದ್ದು, ಸೋಂಕಿತರ ಸಂಖ್ಯೆ 51,100ಕ್ಕೆ ಏರಿಕೆಯಾಗಿದೆ. ಆ ಮೂಲಕ ಕೊರೋನಾ ವೈರಸ್ ತವರು ಚೀನಾದ ವುಹಾನ್ ಅನ್ನು ಕೂಡ ಮುಂಬೈ ಮೀರಿಸಿದೆ.
ಕೊರೊನಾ ಸೋಂಕು
ಕೊರೊನಾ ಸೋಂಕು

ಮುಂಬೈ: ಮಾರಕ ಕೊರೋನಾ ವೈರಸ್ ಗೆ ವಾಣಿಜ್ಯ ರಾಜಧಾನಿ ಮುಂಬೈ ತತ್ತರಿಸಿ ಹೋಗಿದ್ದು, ಸೋಂಕಿತರ ಸಂಖ್ಯೆ 51,100ಕ್ಕೆ ಏರಿಕೆಯಾಗಿದೆ. ಆ ಮೂಲಕ ಕೊರೋನಾ ವೈರಸ್ ತವರು ಚೀನಾದ ವುಹಾನ್ ಅನ್ನು ಕೂಡ ಮುಂಬೈ ಮೀರಿಸಿದೆ.

ಮುಂಬೈನಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 51,100ಕ್ಕೆ ಏರಿಕೆಯಾಗಿದ್ದು, ಇದು ಚೀನಾದ ವುಹಾನ್ ಗಿಂತ ಸುಮಾರು 700 ಹೆಚ್ಚು ಸೋಂಕಿತರನ್ನು ಹೊಂದಿದೆ. ವುಹಾನ್ ನಲ್ಲಿ ಸೋಂಕಿತರ ಸಂಖ್ಯೆ 50,333ರಷ್ಟಿತ್ತು. ಅಲ್ಲದೆ 3,869 ಮಂದಿ ಸಾವನ್ನಪ್ಪಿದ್ದರು. ಆದರೆ ಮುಂಬೈನಲ್ಲಿ ಈ ವರೆಗೂ 1,760  ಮಂದಿ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದಲ್ಲಿ 90 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ
ಇನ್ನು ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 90 ಸಾವಿರ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಾದ್ಯತ 2,259 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 90,787ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಇಂದು 120 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಮಹಾರಾಷ್ಟ್ರದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 3,289ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಈ ವರೆಗೂ 42,638 ಮಂದಿ ಸೋಂಕಿತರು ಗುಣಮುಖರಾಗಿದ್ದು, 48,149 ಸಕ್ರಿಯ ಪ್ರಕರಣಗಳಿವೆ.

ಇತ್ತೀಚೆಗಷ್ಟೇ ಮಹಾರಾಷ್ಟ್ಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com