ತಿರುಪತಿ ತಿಮ್ಮಪ್ಪನ ದರ್ಶನ ಆರಂಭ: ಪ್ರತಿನಿತ್ಯ 6 ಸಾವಿರ ಭಕ್ತರಿಗೆ ಮಾತ್ರ ಅವಕಾಶ

ಕೊರೋನಾ ಲಾಕ್​ಡೌನ್​​ನಿಂದ ಬಂದ್​ ಆಗಿದ್ದ ತಿರುಪತಿ ತಿಮ್ಮಪ್ಪನ ಸಾರ್ವಜನಿಕರ ದರ್ಶನಕ್ಕೆ ಇಂದಿನಿಂದ ಅವಕಾಶ ಮಾಡಿಕೊಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಆಂಧ್ರಪ್ರದೇಶ ಸರ್ಕಾರದ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳ ನಡುವೆ ತಿಮ್ಮಪ್ಪನ ದರ್ಶನಕ್ಕೆ ಸೀಮಿತ ಸಂಖ್ಯೆಯ ಭಕ್ತರಿಗೆ ಅವಕಾಶ ನೀಡಲಾಗಿದೆ. 
ತಿರುಪತಿ ದೇವಾಲಯ
ತಿರುಪತಿ ದೇವಾಲಯ

ತಿರುಪತಿ: ಕೊರೋನಾ ಲಾಕ್​ಡೌನ್​​ನಿಂದ ಬಂದ್​ ಆಗಿದ್ದ ತಿರುಪತಿ ತಿಮ್ಮಪ್ಪನ ಸಾರ್ವಜನಿಕರ ದರ್ಶನಕ್ಕೆ ಇಂದಿನಿಂದ ಅವಕಾಶ ಮಾಡಿಕೊಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಆಂಧ್ರಪ್ರದೇಶ ಸರ್ಕಾರದ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳ ನಡುವೆ ತಿಮ್ಮಪ್ಪನ ದರ್ಶನಕ್ಕೆ ಸೀಮಿತ ಸಂಖ್ಯೆಯ ಭಕ್ತರಿಗೆ ಅವಕಾಶ ನೀಡಲಾಗಿದೆ. 

ಹೀಗಾಗಿ ಕೇವಲ 6 ಸಾವಿರ ಮಂದಿ ಭಕ್ತರು ಮಾತ್ರ ತಿಮ್ಮಪ್ಪನ ದರ್ಶನಕ್ಕೆ ಈಗಾಗಲೇ ಸಾಲಿನಲ್ಲಿ ನಿಂತಿದ್ಧಾರೆ. ಕೇಂದ್ರದ ಮಾರ್ಗಸೂಚಿಯ ಪ್ರಕಾರ 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ದರ್ಶನಕ್ಕೆ ಅವಕಾಶ ಇಲ್ಲ ಎಂದು ಟಿಡಿಪಿ ಸ್ಪಷ್ಟಪಡಿಸಿದೆ. 

ದರ್ಶನಕ್ಕಾಗಿ ಈಗಾಗಲೇ ಆನ್​​ಲೈನ್ ಮೂಲಕ 3 ಸಾವಿರ ಜನರಿಗೆ ಟಿಕೆಟ್ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಇನ್ನುಳಿದ 3 ಸಾವಿರ ಟಿಕೆಟ್​ಗಳನ್ನು ತಿರುಪತಿಯ ಅಲಿಪಿರಿ ಕೌಂಟರ್​ನಲ್ಲಿ ಕೊಡಲಾಗುತ್ತಿದೆ.

ಮೂರು ದಿನಗಳಿಂದ ಟಿಕೆಟ್‌ಗಾಗಿ ತುಂಬಾ ಜನ ಆಗಮಿಸುತ್ತಿದ್ದಾರೆ. ಹೀಗಾಗಿ ಕೇವಲ 11 ಗಂಟೆಯ ಒಳಗೆ ಎಲ್ಲಾ ಟಿಕೆಟ್‌ಗಳೂ ಮಾರಾಟವಾಗುತ್ತಿವೆ. ಬಾಲಾಜಿ ದರ್ಶನಕ್ಕೆ ಈವರೆಗೆ ಜೂನ್.30ರ ವರೆಗಿನ ಎಲ್ಲಾ 9,000 ಟಿಕೆಟ್‌ಗಳು ಮಾರಾಟ ಮಾಡಲಾಗಿದ್ದು, ಜೂನ್.12ರ ನಂತರ ಮತ್ತೆ ಟಿಕೆಟ್ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ ಎಂದು ಟಿಟಿಡಿ ಆಡಳಿತ ಮಂಡಳಿ ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com