ಯುದ್ಧದಲ್ಲಿ ಸೈನಿಕರನ್ನು ತೃಪ್ತಿಗೊಳಿಸುವುದು ಮುಖ್ಯ, ವೈದ್ಯರ ಕಷ್ಟದ ಬಗ್ಗೆ ಯೋಚಿಸಿ:ಸುಪ್ರೀಂ ಕೋರ್ಟ್

ಯುದ್ಧದಲ್ಲಿ ಸೈನಿಕರನ್ನು ಅಸಂತೋಷಗೊಳಿಸಲಾಗುವುದಿಲ್ಲ. ಅವರ ಕುಂದುಕೊರತೆ, ಕಷ್ಟಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಹಣ ನೀಡಿ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಛಾಟಿ ಬೀಸಿದ ಘಟನೆ ನಡೆದಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ:ಯುದ್ಧದಲ್ಲಿ ಸೈನಿಕರನ್ನು ಅಸಂತೋಷಗೊಳಿಸಲಾಗುವುದಿಲ್ಲ. ಅವರ ಕುಂದುಕೊರತೆ, ಕಷ್ಟಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಹಣ ನೀಡಿ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಛಾಟಿ ಬೀಸಿದ ಘಟನೆ ನಡೆದಿದೆ.

ಕೋವಿಡ್-19 ವಿರುದ್ಧ ಹಗಲಿರುಳು ಹೋರಾಡುತ್ತಿರುವ ವೈದ್ಯರಿಗೆ ವೇತನ ಮತ್ತು ಸೂಕ್ತ ವಸತಿ ವ್ಯವಸ್ಥೆ ನೀಡದಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿರುವವರಿಗೆ ವೇತನ ನೀಡದಿರುವ ವಿಷಯದಲ್ಲಿ ಕೋರ್ಟ್ ಮಧ್ಯ ಪ್ರವೇಶಿಸಬಾರದು, ಸರ್ಕಾರವೇ ಇದನ್ನು ಬಗೆಹರಿಸಬೇಕು ಎಂದು ಹೇಳಿತು.

ತಮಗೆ ವೇತನವನ್ನು ಸರ್ಕಾರ ಸರಿಯಾಗಿ ನೀಡುತ್ತಿಲ್ಲ ಎಂದು ವೈದ್ಯರೊಬ್ಬರು ಸಲ್ಲಿಸಿದ ಮನವಿಯನ್ನು ಆಲಿಸಿದ ಕೋರ್ಟ್, ಇಂದು ಈ ರೀತಿ ಆದೇಶ ನೀಡಿದೆ. ಯುದ್ಧದಲ್ಲಿ ಸೈನಿಕರು ಬೇಸರಗೊಳ್ಳುವುದನ್ನು ಯಾರೂ ಇಷ್ಟಪಡುವುದಿಲ್ಲ. ಇನ್ನಷ್ಟು ಪ್ರಯತ್ನ ಹಾಕಿ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವವರ ಕಷ್ಟಗಳನ್ನು ಆಲಿಸಿ ಹಣ ನೀಡಿ, ಕೊರೋನಾ ಎಂಬ ಯುದ್ಧದಲ್ಲಿ ಹೋರಾಡುತ್ತಿರುವ ಸೈನಿಕರಾದ ವೈದ್ಯರನ್ನು ಈ ಸಂದರ್ಭದಲ್ಲಿ ತೃಪ್ತಿಪಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್ ಕೆ ಕೌಲ್ ಮತ್ತು ಎಂ ಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ಸರ್ಕಾರದ ಪರ ವಕೀಲ ತುಶಾರ್ ಮೆಹ್ತಾ ಈ ವಿಷಯದಲ್ಲಿ ಉತ್ತಮ ಸಲಹೆಗಳು ಬಂದರೆ ಅವುಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com