ಶ್ರಮಿಕ್ ರೈಲು
ಶ್ರಮಿಕ್ ರೈಲು

ಏಳು ರಾಜ್ಯಗಳಿಂದ 63 ಶ್ರಮಿಕ್‍ ವಿಶೇಷ ರೈಲುಗಳಿಗಾಗಿ ಮನವಿ, ಕರ್ನಾಟಕದಿಂದ 6 ರೈಲುಗಳಿಗೆ ಬೇಡಿಕೆ

ವಲಸೆ ಕಾರ್ಮಿಕರು ಮತ್ತು ವಿವಿಧ ರಾಜ್ಯಗಳಲ್ಲಿ ಸಿಲುಕಿರುವವರು ತಮ್ಮ ಸ್ವಂತ ಸ್ಥಳ ಸೇರಲು ರಾಜ್ಯಗಳು ಮನವಿ ಮಾಡಿದರೆ 24 ಗಂಟೆಗಳ ಒಳಗೆ ರೈಲುಗಳನ್ನು ಒದಗಿಸುವುದಾಗಿ ರೈಲ್ವೆ ಮಂಡಳಿಯ ಅಧ್ಯಕ್ಷರು ಎಲ್ಲ ರಾಜ್ಯಗಳಿಗೆ ಪತ್ರ ಬರೆದ ನಂತರ ಏಳು ರಾಜ್ಯಗಳು ಇನ್ನೂ 63 ಶ್ರಮಿಕ್‍ ವಿಶೇಷ ರೈಲುಗಳನ್ನು ಒದಗಿಸುವಂತೆ ಕೋರಿವೆ.

ನವದೆಹಲಿ: ವಲಸೆ ಕಾರ್ಮಿಕರು ಮತ್ತು ವಿವಿಧ ರಾಜ್ಯಗಳಲ್ಲಿ ಸಿಲುಕಿರುವವರು ತಮ್ಮ ಸ್ವಂತ ಸ್ಥಳ ಸೇರಲು ರಾಜ್ಯಗಳು ಮನವಿ ಮಾಡಿದರೆ 24 ಗಂಟೆಗಳ ಒಳಗೆ ರೈಲುಗಳನ್ನು ಒದಗಿಸುವುದಾಗಿ ರೈಲ್ವೆ ಮಂಡಳಿಯ ಅಧ್ಯಕ್ಷರು ಎಲ್ಲ ರಾಜ್ಯಗಳಿಗೆ ಪತ್ರ ಬರೆದ ನಂತರ ಏಳು ರಾಜ್ಯಗಳು ಇನ್ನೂ 63 ಶ್ರಮಿಕ್‍ ವಿಶೇಷ ರೈಲುಗಳನ್ನು ಒದಗಿಸುವಂತೆ ಕೋರಿವೆ.

ರೈಲ್ವೆ ಮಂಡಳಿ ಅಧ್ಯಕ್ಷರು ಈ ವಿಷಯ ಕುರಿತು ಮೇ 29, ಜೂನ್ 3 ಮತ್ತು 9 ರಂದು ರಾಜ್ಯಗಳಿಗೆ ಪತ್ರಗಳನ್ನು ಬರೆದಿದ್ದರು. ಬೇಡಿಕೆಯ ಮೇಲೆ 24 ಗಂಟೆಗಳ ಒಳಗೆ ಭಾರತೀಯ ರೈಲ್ವೆ ಅಗತ್ಯ ಸಂಖ್ಯೆಯ ಶ್ರಮಿಕ್ ವಿಶೇಷ ರೈಲುಗಳನ್ನು ಒದಗಿಸಲಿದೆ ಎಂದು ಪ್ರತಿಪಾದಿಸಿದ್ದರು.

63 ಶ್ರಮಿಕ್ ವಿಶೇಷ ರೈಲುಗಳ ಪೈಕಿ 32 ರೈಲುಗಳನ್ನು ಕೇರಳ, ತಮಿಳುನಾಡು 10, ಜಮ್ಮು ಮತ್ತು ಕಾಶ್ಮೀರ 9, ಕರ್ನಾಟಕ 6, ಆಂಧ್ರಪ್ರದೇಶ 3, ಪಶ್ಚಿಮ ಬಂಗಾಳ ಎರಡು ಮತ್ತು ಗುಜರಾತ್‍ ಒಂದು ರೈಲಿಗಾಗಿ ಮನವಿ ಮಾಡಿವೆ. ಆದರೆ, ಉತ್ತರ ಪ್ರದೇಶ ಸರ್ಕಾರ ಇನ್ನೂ ಬೇಡಿಕೆಯನ್ನು ತಿಳಿಸಿಲ್ಲ ಎಂದು ಭಾರತೀಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಮೇ 1 ರಿಂದ 4,347 ಶ್ರಮಿಕ್ ವಿಶೇಷ ರೈಲುಗಳ ಮೂಲಕ ಸುಮಾರು 60 ಲಕ್ಷ ಜನರನ್ನು ತಮ್ಮ ಸ್ವಂತ ರಾಜ್ಯಗಳಿಗೆ ಸಾಗಿಸಿರುವ ಭಾರತೀಯ ರೈಲ್ವೆ, ರಾಜ್ಯಗಳಿಂದ ಬೇಡಿಕೆ ಸ್ವೀಕರಿಸಿದ 24 ಗಂಟೆಗಳ ಒಳಗೆ ಈ ರೈಲುಗಳನ್ನು ಒದಗಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com