ಕೋವಿಡ್-19: ತುರ್ತು ಚಿಕಿತ್ಸೆಗೆ ರೆಮ್ಡಿಸಿವಿರ್, ಪ್ರಾಥಮಿಕ ಹಂತದಲ್ಲಿ ಹೆಚ್.ಸಿ.ಕ್ಯು ಬಳಕೆಗೆ ಆರೋಗ್ಯ ಸಚಿವಾಲಯದ ಒಪ್ಪಿಗೆ

ಕೋವಿಡ್-19 ಸೋಂಕಿಗೆ ಗುರಿಯಾಗಿರುವವರಿಗೆ ತುರ್ತು ಚಿಕಿತ್ಸೆಗೆ ರೆಮ್ಡಿಸಿವಿರ್ ಹಾಗೂ ಪ್ರಾಥಮಿಕ ಚಿಕಿತ್ಸೆಗೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ಬಳಕೆಗೆ ಕೇಂದ್ರ ಆರೋಗ್ಯ ಸಚಿವಾಲಯ ಅನುಮತಿ ನೀಡಿದೆ.

ಇಮ್ಯುನೋ ಮಾಡ್ಯುಲೇಟರ್ ಟೋಸಿಲಿಜುಮ್ಯಾಬ್ ಹಾಗೂ ಕೋನ್ವಾಲಿಸೆಂಟ್ ಪ್ಲಾಸ್ಮಾ ಥೆರೆಪಿಯನ್ನು ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಆಫ್-ಲೇಬಲ್ ಅಪ್ಲಿಕೇಷನ್ ಆಗಿ ಬಳಕೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಈ ಹಿಂದಿನ ನಿಲುವನ್ನು ಬದಲಾವಣೆ ಮಾಡಿಕೊಂಡಿರುವ ಕೇಂದ್ರ ಸರ್ಕಾರ, ಕೋವಿಡ್-19 ಕ್ಕೆ ಅನುಸರಿಸಬೇಕಿರುವ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೋಟೋಕಾಲ್ ನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದ್ದು, ಕೋವಿಡ್-19 ರೋಗಿಗಳಿಗೆ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡುವುದಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ನೀಡಬೇಕೆ ಹೊರತು ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ನೀಡಬಾರದೆಂದು ಹೇಳಿದೆ. ಹೊಸ ಪ್ರೋಟೋಕಾಲ್ ನಲ್ಲಿ ಸಚಿವಾಲಯ ತನ್ನ ಈ ಹಿಂದಿನ ಕೆಲವು ಶಿಫಾರಸ್ಸುಗಳನ್ನು ಹಿಂಪಡೆದಿದೆ. ಈ ಪೈಕಿ ಗಂಭೀರ ಸ್ಥಿತಿಯಲ್ಲಿರುವವರಿಗೆ ಅಥವಾ ಐಸಿಯುನಲ್ಲಿರುವ ರೋಗಿಗಳಿಗೆ ಅಜಿಥ್ರೊಮೈಸಿನ್ ನ ಜೊತೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ನೀಡಬಾರದೆಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com