ದೆಹಲಿಯಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆ 500 ರೈಲ್ವೇ ಕೋಚ್ ಪೂರೈಕೆ; ಅಮಿತ್ ಶಾ

ಕೋವಿಡ್ -19 ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ತಕ್ಷಣ ದೆಹಲಿಗೆ 500 ರೈಲ್ವೆ ಬೋಗಿಗಳನ್ನು ನೀಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ. 
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ಕೋವಿಡ್ -19 ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ತಕ್ಷಣ ದೆಹಲಿಗೆ 500 ರೈಲ್ವೆ ಬೋಗಿಗಳನ್ನು ನೀಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ. 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ,  ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತಿತರರೊಂದಿಗೆ ಇಂದು ಸಭೆ ನಡೆಸಿ ಕೋವಿಡ್-19 ಸ್ಥಿತಿಗತಿಯ ಕುರಿತು ಸಭೆ ನಡೆಸಿದ ಅಮಿತ್ ಶಾ, ಈ ರೈಲ್ವೇ ಬೋಗಿಗಳಿಗೆ ಹೆಚ್ಚುವಾರಿಯಾಗಿ ಕೋವಿಡ್-19 ರೋಗಿಗಳಿಗಾಗಿ 8 ಸಾವಿರ ಹಾಸಿಗೆಗಳನ್ನು ಸೇರ್ಪಡೆ ಮಾಡಲಾಗುವುದು, ಸೋಂಕು ವಿರುದ್ದ ಹೋರಾಡುವ ನಿಟ್ಟಿನಲ್ಲಿ ಎಲ್ಲಾ ಉಪಕರಣಗಳನ್ನು ಒದಗಿಸಲಾಗುವುದು ಎಂದರು.

ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾವೈರಸ್ ಸೋಂಕು ಹರಡುವಿಕೆ ತಪ್ಪಿಸುವ ನಿಟ್ಟಿನಲ್ಲಿ ಮುಂದಿನ ಎರಡು ದಿನಗಳಲ್ಲಿ ಎರಡು ಪಟ್ಟು ಹಾಗೂ  ಆರು ದಿನಗೊಳಗೆ ಮೂರು ಪಟ್ಟು ಕೋವಿಡ್-19 ಪರೀಕ್ಷೆಯನ್ನು  ಹೆಚ್ಚಿಸಲಾಗುವುದು, ಕೆಲ ದಿನಗಳಲ್ಲಿ ಕಂಟೈನ್ ಮೆಂಟ್ ವಲಯಗಳಲ್ಲಿನ ಪ್ರತಿ ಮತಗಟ್ಟೆಯಲ್ಲಿ ಪರೀಕ್ಷಾ ಸೌಕರ್ಯವನ್ನು ಹೆಚ್ಚಿಸಲಾಗುವುದು,  ಎಂದು ಅಮಿತ್ ಶಾ ಹೇಳಿದ್ದಾರೆ.

ಕೊರೋನಾವೈರಸ್ ಸೋಂಕಿನಿಂದ ನವದೆಹಲಿಯಲ್ಲಿ 1200 ರೋಗಿಗಳು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 39 ಸಾವಿರಕ್ಕೆ ಏರಿಕೆ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com