ಛತ್ತೀಸ್ ಗಢ: ನಕ್ಸಲರಿಗೆ ಟ್ರ್ಯಾಕ್ಟರ್, ಗೂಡ್ಸ್ ಸರಬರಾಜು ಮಾಡಿದ ಬಿಜೆಪಿ ಮುಖಂಡನ ಬಂಧನ

ದಕ್ಷಿಣ ಬಸ್ತಾರ್‌ನ ಮಾವೋವಾದಿಗಳಿಗೆ ಟ್ರಾಕ್ಟರ್ ಮತ್ತು ಇತರ ವಸ್ತುಗಳನ್ನು ಸರಬರಾಜು ಮಾಡಿದ ಆರೋಪದ ಮೇಲೆ ದಂತೇವಾಡದ ಬಿಜೆಪಿ ಮುಖಂಡ ಮತ್ತು ಆತನ ಸಹಚರನನ್ನು ಛತ್ತೀಸ್ ಗಢ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಪುರ್: ದಕ್ಷಿಣ ಬಸ್ತಾರ್‌ನ ಮಾವೋವಾದಿಗಳಿಗೆ ಟ್ರಾಕ್ಟರ್ ಮತ್ತು ಇತರ ವಸ್ತುಗಳನ್ನು ಸರಬರಾಜು ಮಾಡಿದ ಆರೋಪದ ಮೇಲೆ ದಂತೇವಾಡದ ಬಿಜೆಪಿ ಮುಖಂಡ ಮತ್ತು ಆತನ ಸಹಚರನನ್ನು ಛತ್ತೀಸ್ ಗಢ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ದಂತೇವಾಡ ಬಿಜೆಪಿ ಉಪಾಧ್ಯಕ್ಷ ಜಗತ್ ಪೂಜಾರಿ ಅವರು ಅಬುಜ್ಮಡ್ ನಲ್ಲಿರುವ ನಕ್ಸಲಿರಿಗೆ ಸರಕು ಮತ್ತು ಇತರ ಸಾಮಗ್ರಿಗಳನ್ನು ವ್ಯವಸ್ಥೆ ಮಾಡಿರುವ ಬಗ್ಗೆ ಜಿಲ್ಲಾ ಪೊಲೀಸರಿಗೆ ಖಚಿತ ಮಾಹಿತಿ ದೊರೆತ ನಂತರ ಬಿಜೆಪಿ ಮುಖಂಡನನ್ನು ಬಂಧಿಸಲಾಗಿದೆ.

ಪೂಜಾರಿ ಅವರು ಕಳೆದ ಹತ್ತು ವರ್ಷಗಳಿಂದ ಈ ಪ್ರದೇಶದ ವಿವಿಧ ಗುತ್ತಿಗೆ ಕಾಮಗಾರಿಗಳನ್ನು ಮಾಡಿಸುತ್ತಿದ್ದಾರೆ. ಹೀಗಾಗಿ ಮಾವೋವಾದಿಗಳಿಗೆ ಅವರು ಪೂರೈಸುತ್ತಿರುವ ವಿವಿಧ ವಸ್ತುಗಳ ಬಗ್ಗೆ ನಾವು ಮಾಹಿತಿ ಪಡೆಯುತ್ತಿದ್ದೇವೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಶೇಕ್ ಪಲ್ಲವ ಅವರು ಹೇಳಿದ್ದಾರೆ.

ಇತ್ತೀಚೆಗೆ ಅವರು ಕೆಲವು ಮಧ್ಯವರ್ತಿಗಳ ಮೂಲಕ 100 ರೇಡಿಯೋ ಸೆಟ್‌ಗಳು, ಪ್ರಿಂಟರ್, ಲ್ಯಾಪ್‌ಟಾಪ್‌ಗಳನ್ನು ಮತ್ತು ಇತರ ವಸ್ತುಗಳನ್ನು ನಕ್ಸಲರಿಗೆ ತಲುಪಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ನಾವು ಅವರನ್ನು ವಿಚಾರಣೆಗೆ ಒಳಪಡಿಸುತ್ತೇವೆ ಎಂದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com