ಗುಜರಾತ್ ನಲ್ಲಿ 5.5ರಷ್ಟು ತೀವ್ರತೆಯ ಭೂಕಂಪ, ಆವರಿಸಿದ ಭೀತಿ

ಕೊರೋನಾ ಸಂಕಷ್ಟ ಗುಜರಾತ್ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದರೆ ಮತ್ತೊಂದು ಕಡೆ, ಭಾನುವಾರ ಭೂಕಂಪನ ಸಂಭವಿಸಿದ್ದು, ಜನತೆಯಲ್ಲಿ ಭೀತಿಯ ವಾತವರಣ ನಿರ್ಮಾಣವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಜಕೋಟ್‌: ಕೊರೋನಾ ಸಂಕಷ್ಟ ಗುಜರಾತ್ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದರೆ ಮತ್ತೊಂದು ಕಡೆ, ಭಾನುವಾರ ಭೂಕಂಪನ ಸಂಭವಿಸಿದ್ದು, ಜನತೆಯಲ್ಲಿ ಭೀತಿಯ ವಾತವರಣ ನಿರ್ಮಾಣವಾಗಿದೆ.

ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 5.5ರಷ್ಟು ದಾಖಲಾಗಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ ರಾತ್ರಿ 8.13ಕ್ಕೆ ರಾಜಕೋಟ್‌ನಿಂದ ವಾಯುವ್ಯದ ಉತ್ತರ ದಿಕ್ಕಿನ 122 ಕಿಮೀ ಅಂತರದಲ್ಲಿ ಕಂಪನ ಕೇಂದ್ರ ಬಿಂದು ದಾಖಲಾಗಿದೆ.

ಕಚ್‌ ಜಿಲ್ಲೆಯ ಬಚಾವು ಪ್ರದೇಶದ ಬಳಿ ಭೂಕಂಪನ ಸಂಭವಿಸಿದೆ. 

ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ರಾಜಕೋಟ್‌, ಕಚ್‌ ಹಾಗೂ ಪಠಾಣ್‌ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಪರಿಸ್ಥಿತಿಯ ವರದಿ ಪಡೆದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಗುಜರಾತ್‌ ಸಿಎಂ ಕಚೇರಿ, ಮುಖ್ಯಮಂತ್ರಿ ವಿಜಯ್‌ ರೂಪಾನಿ, ತಕ್ಷಣವೇ ರಾಜಕೋಟ್‌, ಕಚ್‌ ಮತ್ತು ಪಠಾಣ್‌ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆದಿದ್ದು, ಪರಿಸ್ಥಿತಿಯ ವರದಿ ಪಡೆದುಕೊಂಡಿದ್ದಾರೆ ಎಂದು ಹೇಳಿದೆ. ಇದುವರೆಗೂ ಯಾವುದೇ ಸಾವು-ನೋವಿನ ವರದಿಯಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com