ನವದೆಹಲಿ: ಕೇಜ್ರಿವಾಲ್ ಜೊತೆಗೆ ಅಮಿತ್ ಶಾ ಸಭೆ, ಕೋವಿಡ್ ಬಿಕ್ಕಟ್ಟು ಕುರಿತು ಚರ್ಚೆ 

ಕೊರೋನಾ ವೈರಸ್ ಪ್ರಕರಣಗಳು ಆತಂಕಕಾರಿಯಾಗಿ ಏರುತ್ತಿರುವಂತೆಯೇ, ಕೇಂದ್ರ ಗೃಹ ಸಚಿವ ಅಮಿತ್ ಇಂದು ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತಿತರೊಂದಿಗೆ ಸಭೆ ನಡೆಸಿ, ದೆಹಲಿಯ ಪರಿಸ್ಥಿತಿ ಕುರಿತಂತೆ ಚರ್ಚಿಸಿದರು.
ಸಭೆಯಲ್ಲಿ ಅಮಿತ್ ಶಾ, ಕೇಜ್ರಿವಾಲ್ ಮತ್ತಿತರರು
ಸಭೆಯಲ್ಲಿ ಅಮಿತ್ ಶಾ, ಕೇಜ್ರಿವಾಲ್ ಮತ್ತಿತರರು

ನವದೆಹಲಿ: ಕೊರೋನಾ ವೈರಸ್ ಪ್ರಕರಣಗಳು ಆತಂಕಕಾರಿಯಾಗಿ ಏರುತ್ತಿರುವಂತೆಯೇ, ಕೇಂದ್ರ ಗೃಹ ಸಚಿವ ಅಮಿತ್ ಇಂದು ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತಿತರೊಂದಿಗೆ ಸಭೆ ನಡೆಸಿ, ದೆಹಲಿಯ ಪರಿಸ್ಥಿತಿ ಕುರಿತಂತೆ ಚರ್ಚಿಸಿದರು.

ರಾಷ್ಟ್ರ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗಿದೆ. ಈವರೆಗೂ ಕೊರೋನಾ ಸೋಂಕಿನಿಂದ ನವದೆಹಲಿಯಲ್ಲಿ 1200 ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 39 ಸಾವಿರಕ್ಕೆ ಏರಿಕೆಯಾಗಿದೆ.  

ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದು ಹೇಗೆ, ಆಸ್ಪತ್ರೆಗಳಲ್ಲಿ ಲಭ್ಯವಿರುವ ಆಸನಗಳು, ಪರೀಕ್ಷಾ ಸೌಕರ್ಯ ಮತ್ತು ಇನ್ನಿತರ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕುರಿತಂತೆ ಚರ್ಚೆ ನಡೆಸಲಾಯಿತು ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಕೇಜ್ರಿವಾಲ್ ಹೊರತುಪಡಿಸದಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಕೇಂದ್ರ ಆರೋಗ್ಯ ಸತಿವ ಡಾ. ಹರ್ಷವರ್ಧನ್ ಹಾಗೂ ರಾಜ್ಯ ವಿಪತ್ತು ನಿರ್ವಹಣಾ, ಗೃಹ, ಆರೋಗ್ಯ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

ದೆಹಲಿಯ ಮೂರು ಮಹಾನಗರ ಪಾಲಿಕೆಗಳ ಮೇಯರ್ ಗಳೊಂದಿಗೆ ಇಂದು ಸಂಜೆ ಅಮಿತ್ ಶಾ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಇದರಲ್ಲಿಯೂ ಲೆಪ್ಟಿನೆಂಟ್ ಗೌರ್ವನರ್, ಮುಖ್ಯಮಂತ್ರಿ ಹಾಗೂ ಕೇಂದ್ರ ಆರೋಗ್ಯ ಸಚಿವರು ಪಾಲ್ಗೊಳ್ಳಲಿದ್ದಾರೆ. ಕೊರೋನಾ ವೈರಸ್ ಹೆಚ್ಚಾಗಿರುವ ರಾಜ್ಯಗಳ ಪೈಕಿಯಲ್ಲಿ ಮಹಾರಾಷ್ಟ್ರ, ತಮಿಳುನಾಡು ಹೊರತುಪಡಿಸಿದರೆ ದೆಹಲಿ ಮೂರನೇ ರಾಜ್ಯವಾಗಿದೆ. 

ದೆಹಲಿಯಲ್ಲಿನ ಪರಿಸ್ಥಿತಿ ಕುರಿತಂತೆ ಶುಕ್ರವಾರ ಸುಪ್ರೀಂಕೋರ್ಟ್ ಎಎಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಕೊರೋನಾವೈರಸ್ ರೋಗಿಗಳಿಗೆ ಆಸನಗಳ ಸಂಖ್ಯೆ ಹಾಗೂ ವೆಂಟಿಲೇಟರ್ ಸೌಕರ್ಯಗಳನ್ನು ಹೆಚ್ಚಿಸುವಂತೆ ಹೈಕೋರ್ಟ್ ಕೂಡಾ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com